
ಸಾಗರದ ಮಾರಿ ಜಾತ್ರೆಗೆ ಕಾರಿನಲ್ಲಿ ತೆರಳುತ್ತಿದ್ದ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ಹಾಡಹಗಲೇ ನಗ – ನಗದು ಅಪಹರಿಸಿರುವ ಆಘಾತಕಾರಿ ಘಟನೆ ಶಿವಮೊಗ್ಗ ಸಮೀಪ ನಡೆದಿದೆ.
ತರೀಕೆರೆಯ ವಸಂತ ಎಂಬವರು ಮಂಗಳವಾರ ಮಧ್ಯಾಹ್ನ ಸಾಗರಕ್ಕೆ ತೆರಳುತ್ತಿದ್ದ ವೇಳೆ ಶಿವಮೊಗ್ಗ ಸಮೀಪದ ಟ್ರೀ ಪಾರ್ಕ್ ಬಳಿ ಮೂತ್ರ ವಿಸರ್ಜನೆಗೆಂದು ರಸ್ತೆ ಬದಿ ಕಾರು ನಿಲ್ಲಿಸಿದ್ದಾರೆ.
ಆಗ ಹೋಂಡಾ ಡಿಯೋ ದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವಸಂತ ಅವರ ಕುತ್ತಿಗೆಗೆ ಮಚ್ಚು ಇಟ್ಟು ಚಿನ್ನದ ಸರ ಹಾಗೂ 5,000 ನಗದು ಕಸಿದುಕೊಂಡು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುಂಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.