ಸ್ವದೇಶಿ ಎಫ್‌ಎಂಸಿಜಿ, ಪ್ರಮುಖ ಮತ್ತು ಆಯುರ್ವೇದ ಉತ್ಪನ್ನಗಳ ತಯಾರಕ ಡಾಬರ್ ಭಾರತದಲ್ಲಿ 100 ಪ್ರತಿಶತದಷ್ಟು ‘ಪ್ಲಾಸ್ಟಿಕ್ ತ್ಯಾಜ್ಯ ತಟಸ್ಥ ಕಂಪನಿ'(Plastic waste neutral)ಆಗಿದೆ. ಅಲ್ಲದೇ ಈ ಹೆಗ್ಗುರುತನ್ನು ಸಾಧಿಸಿದ ಮೊದಲ ಭಾರತೀಯ ಗ್ರಾಹಕ ಸರಕುಗಳ ಕಂಪನಿ ಎಂದು ಸ್ವತಃ ಡಾಬರ್ ಹೇಳಿಕೊಂಡಿದೆ.
2021-22ರ ಹಣಕಾಸು ವರ್ಷದಲ್ಲಿ ಡಾಬರ್ ಭಾರತದಾದ್ಯಂತ ಗ್ರಾಹಕರು ಬಳಸಿದ ಸುಮಾರು 27,000MT ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಸಂಸ್ಕರಿಸಿ ಮತ್ತು ಮರುಬಳಕೆ ಮಾಡಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಮಾಡೆಲ್ ತೆಗೆದುಕೊಂಡಿದ್ದಾಳೆ ಡ್ರೈವರ್ ಆಗುವ ನಿರ್ಧಾರ….!
ಇದರೊಂದಿಗೆ, ಡಾಬರ್ ಈ ಹೆಗ್ಗುರುತನ್ನು ಸಾಧಿಸಿದ ಮೊದಲ ಭಾರತೀಯ ಗ್ರಾಹಕ ಸರಕುಗಳ ಕಂಪನಿಯಾಗಿದೆ. ಈಗ ಡಾಬರ್ ಅದು ಒಂದು ವರ್ಷದಲ್ಲಿ ಮಾರಾಟ ಮಾಡುವ ತನ್ನ ಪ್ರಾಡಕ್ಟ್ ಗಳ ಪ್ಯಾಕೇಜಿಂಗ್‌ನಲ್ಲಿ ಬಳಸುವ ಅಷ್ಟು ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುತ್ತದೆ, ಸಂಸ್ಕರಿಸುತ್ತದೆ ಮತ್ತು ಮರುಬಳಕೆ ಮಾಡುತ್ತದೆ. ಇದರಿಂದಲೇ ಡಾಬರ್ ಪ್ಲಾಸ್ಟಿಕ್ ತ್ಯಾಜ್ಯ ತಟಸ್ಥ ಕಂಪನಿಯಾಗಿದೆ.
ಈ ಉತ್ತಮ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಡಾಬರ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಶಾರುಖ್ ಎ ಖಾನ್, ನಮ್ಮ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವುದು ಮಾತ್ರವಲ್ಲದೆ ತ್ಯಾಜ್ಯವನ್ನು ತಡೆಗಟ್ಟುವಲ್ಲಿಯೂ ಶ್ರಮಿಸಿದ ಡಾಬರ್ ಕುಟುಂಬಕ್ಕೆ ಇದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಅಷ್ಟೇ ಅಲ್ಲಾ ಪ್ಲಾಸ್ಟಿಕ್ ತ್ಯಾಜ್ಯ ಭೂಮಿ ಮತ್ತು ಸಾಗರಗಳನ್ನು ತಲುಪುವುದು ಇದರಿಂದ ನಿಂತಿದೆ ಎಂದಿದ್ದಾರೆ.
PET ಮತ್ತು HDPE ಬಾಟಲಿಗಳು, PP ಕ್ಯಾಪ್‌ಗಳು ಮತ್ತು ಲೇಬಲ್‌ಗಳು, ಬಹು-ಪದರದ ಪ್ಲಾಸ್ಟಿಕ್‌ಗಳು ಮತ್ತು ಪಾನೀಯ ಪೆಟ್ಟಿಗೆಗಳವರೆಗೆ ಎಲ್ಲಾ ರೀತಿಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಮರುಬಳಕೆ ಮಾಡಲಾಗುತ್ತಿದೆ. ನಾವು ನಮ್ಮ ಪರಿಸರ, ಸಾಮಾಜಿಕ ಮತ್ತು ಆಡಳಿತ (ESG) ಪ್ರಯಾಣದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿ, ಈಗ ಈ ಹೆಗ್ಗುರುತು ಪಡೆದ ಮೊದಲಿಗರಾಗಿದ್ದೇವೆ. ಭಾರತದ ಅತಿದೊಡ್ಡ ಎಫ್‌ಎಂಸಿಜಿ ಅಂದರೆ ಡಾಬರ್ ಕಂಪನಿಯು ಭಾರತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತಟಸ್ಥವಾಗಲಿದೆ ಎಂದು ಖಾನ್ ಅವರು ಹೇಳಿದ್ದಾರೆ.
2021-22 ರಲ್ಲಿ ಭಾರತದಾದ್ಯಂತ 22,000 MT ಗಿಂತಲೂ ಹೆಚ್ಚಿನ ಬಳಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ, ಸಂಸ್ಕರಿಸುವ ಮತ್ತು ಮರುಬಳಕೆ ಮಾಡುವ ಗುರಿಯನ್ನು ಡಾಬರ್ ಹೊಂದಿತ್ತು. ನಾವು ನಿಗದಿತ ಸಮಯಕ್ಕಿಂತ ಮೂರು ತಿಂಗಳ ಮುಂಚಿತವಾಗಿ ಆ ಗುರಿಯನ್ನು ದಾಟಿದ್ದೇವೆ. ಜೊತೆಗೆ ನಮ್ಮ ಪೂರ್ಣ ವರ್ಷದ ಗುರಿ ಈಗ 26,956 MTಗೆ ಏರಿಕೆಯಾಗಿದೆ. ನಾವು ದೇಶಾದ್ಯಂತ ಸರ್ಕಾರ-ನೋಂದಾಯಿತ ಮರುಬಳಕೆ ಪಾಲುದಾರರೊಂದಿಗೆ ಕೆಲಸ ಮಾಡುತ್ತೇವೆ. ನಗರಗಳು, ಪಟ್ಟಣಗಳು, ಹಳ್ಳಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಪ್ರಗತಿಪರ ಕ್ರಮಗಳನ್ನು ಕೈಗೊಂಡಿದ್ದೇವೆ. ಸಮುದಾಯದೊಳಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ, ಎಂದು ಖಾನ್ ತಿಳಿಸಿದ್ದಾರೆ.
ಡಾಬರ್‌ನ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಉಪಕ್ರಮವು 2017-18 ರಲ್ಲಿ ಪ್ರಾರಂಭವಾಯಿತು. ಈ ಉಪಕ್ರಮದ ಅಡಿಯಲ್ಲಿ, ಭಾರತದಾದ್ಯಂತ 150 ನಗರಗಳಲ್ಲಿ ಸ್ಥಳೀಯ ಚಿಂದಿ ಆಯುವವರ ಸಹಾಯದಿಂದ ಡಾಬರ್ ಇಲ್ಲಿಯವರೆಗೆ ಒಟ್ಟು 54,000 MT ಪ್ಲಾಸ್ಟಿಕ್ ತ್ಯಾಜ್ಯವನ್ನು (ಮರುಬಳಕೆ ಮಾಡಬಹುದಾದ ಮತ್ತು ಮರುಬಳಕೆ ಮಾಡಲಾಗದ) ಅಂತಿಮ ಬಳಕೆದಾರರಿಂದ ನೇರವಾಗಿ ಸಂಗ್ರಹಿಸಿದೆ.
ಈ ಬದ್ಧತೆಯ ಭಾಗವಾಗಿ, ಡಾಬರ್ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಾದ್ಯಂತ ಶಾಲಾ ಮಕ್ಕಳೊಂದಿಗೆ ಕೆಲಸ ಮಾಡುತ್ತಿದೆ. ವಿವಿಧ ರೀತಿಯ ತ್ಯಾಜ್ಯಗಳ ಬಗ್ಗೆ ಮತ್ತು ಮೂಲದಲ್ಲಿ ಅವುಗಳನ್ನು ಬೇರ್ಪಡಿಸುವ ಪ್ರಯೋಜನಗಳ ಬಗ್ಗೆ ಅವರಿಗೆ ಶಿಕ್ಷಣ ನೀಡುತ್ತಿದೆ.