ಛತ್ತೀಸಗಢ ಹಾಗೂ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿಯಿದ್ದು ಈ ನಡುವೆ ಎರಡೂ ರಾಜ್ಯದ ಸರ್ಕಾರಗಳು ತಮ್ಮ ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಏರಿಕೆ ಮಾಡಿದೆ. ಛತ್ತೀಸಗಢ ಸರ್ಕಾರವು ತನ್ನ ಉದ್ಯೋಗಿಗಳಿಗೆ 5 ಪ್ರತಿಶತ ಡಿಎ ಏರಿಕೆ ಮಾಡಿದ್ದರೆ ರಾಜಸ್ಥಾನ ಸರ್ಕಾರವು ತನ್ನ ಉದ್ಯೋಗಿಗಳಿಗೆ 396 ಪ್ರತಿಶತದಿಂದ 412 ಪ್ರತಿಶತಕ್ಕೆ ಏರಿಕೆ ಮಾಡಿದೆ.
ಛತ್ತೀಸಗಢ ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕವಾಗಿ 1000 ಕೋಟಿ ರೂಪಾಯಿ ಹೊರೆಯಾಗಲಿದೆ. ಸರ್ಕಾರದ ಈ ಘೋಷಣೆಯಿಂದ 3.80 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾದಂತಾಗಿದೆ. ಅಕ್ಟೋಬರ್ 2022 ರಲ್ಲಿ, ಛತ್ತೀಸ್‌ಗಢವು DA ಅನ್ನು 5 ಶೇಕಡಾದಿಂದ 33 ಶೇಕಡಾಕ್ಕೆ ಹೆಚ್ಚಿಸಿದೆ.
ರಾಜಸ್ಥಾನದಲ್ಲಿ, ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 5 ನೇ ವೇತನ ಆಯೋಗದ ಆಧಾರದ ಮೇಲೆ ಜನವರಿ 2023 ರಿಂದ ಹೆಚ್ಚಿನ ಡಿಎ ಪಡೆಯುತ್ತಾರೆ. ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಅನ್ನು ಶೇ 396 ರಿಂದ ಶೇ 412 ಕ್ಕೆ ಹೆಚ್ಚಿಸಲಾಗಿದೆ.
ಇತ್ತೀಚೆಗೆ, ಮಧ್ಯಪ್ರದೇಶ ಸರ್ಕಾರವು ತುಟ್ಟಿ ಭತ್ಯೆಯಲ್ಲಿ (ಡಿಎ) ಶೇಕಡಾ 4 ರಷ್ಟು ಹೆಚ್ಚಳವನ್ನು ಘೋಷಿಸಿತು, ಇದು ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ಡಿಎಗೆ ಸಮನಾಗಿರುತ್ತದೆ.