alex Certify ಕೋವಿಡ್ ಅವಧಿಯ ಡಿಎ ಹಿಂಬಾಕಿ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಅವಧಿಯ ಡಿಎ ಹಿಂಬಾಕಿ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಮುಂದಿನ ತಿಂಗಳು ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ.

ಸೆಪ್ಟೆಂಬರ್ ನಲ್ಲಿ ಕೇಂದ್ರ ಸರ್ಕಾರ ತುಟ್ಟಿ ಭತ್ಯೆಯನ್ನು ಶೇಕಡ 3ರಷ್ಟು ಹೆಚ್ಚಿಸಲಿದೆ ಎಂದು ಹೇಳಲಾಗಿದೆ. ಇದು ಈ ವರ್ಷದಲ್ಲಿ ಎರಡನೇ ಡಿಎ ಹೆಚ್ಚಳ ಆಗಲಿದೆ. ಜುಲೈ 2024ರಿಂದ ಪೂರ್ವಾನ್ವಯವಾಗುವಂತೆ ಡಿಎ ಹೆಚ್ಚಳ ಮಾಡಿ ಆದೇಶ ಹೊರಡಿಸುವ ಸಾಧ್ಯತೆ ಇದ್ದು, ಇದರೊಂದಿಗೆ ನೌಕರರ ಒಟ್ಟಾರೆ ತುಟ್ಟಿ ಭತ್ಯೆ ಹಾಲಿ ಶೇಕಡ 50 ರಿಂದ ಶೇಕಡ 53ಕ್ಕೆ ಏರಿಕೆಯಾಗಲಿದೆ.

ಕಳೆದ ಮಾರ್ಚ್ 7ರಂದು ಈ ವರ್ಷದ ಮೊದಲ ಡಿಎ ಹೆಚ್ಚಳ ಮಾಡಲಾಗಿತ್ತು. ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಡಿಎ ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಕೋವಿಡ್ 19 ಸಾಂಕ್ರಾಮಿಕ ಅವಧಿಯ ಡಿಎ ಹಿಂಬಾಕಿಯನ್ನು ನೀಡುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...