ನವದೆಹಲಿ: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಡಿಎ ಶೇಕಡ 4ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ. ಜನವರಿಯಿಂದ ಜೂನ್ ವರೆಗಿನ ಅವಧಿಯ ತುಟ್ಟಿಭತ್ಯೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಮಾರ್ಚ್ ನಲ್ಲಿ ಡಿಎ ಮತ್ತು ಡಿಆರ್ ಹೆಚ್ಚಳ ನಿರ್ಧಾರ ಪ್ರಕಟಿಸುವ ಸಂಭವವಿದೆ. ಪ್ರಸ್ತುತ ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರಿಗೆ ಶೇಕಡ 46ರಷ್ಟು ಡಿಎ ಸಿಗುತ್ತಿದ್ದು, ಶೇ. 4 ರಷ್ಟು ಹೆಚ್ಚಳವಾದಲ್ಲಿ ಶೇ. 50ಕ್ಕೆ ಏರಿಕೆ ಆಗಲಿದೆ. ಮಾರ್ಚ್ ನಲ್ಲಿ ಡಿಎ, ಡಿಆರ್ ಹೆಚ್ಚಳದ ನಿರ್ಧಾರ ಪ್ರಕಟಿಸಿದರೂ ಜನವರಿ 1ರಿಂದಲೇ ಅನ್ವಯವಾಗಲಿದೆ. ಏಪ್ರಿಲ್ ನಲ್ಲಿ ಸಿಗುವ ವೇತನದಲ್ಲಿ ಮೂರು ತಿಂಗಳ ಅರಿಯರ್ಸ್ ನೀಡಲಾಗುವುದು ಎನ್ನಲಾಗಿದೆ.