ಬೆಂಗಳೂರು: ರಾಜ್ಯಕ್ಕೆ ಕೇಂದ್ರದಿಂದ ಮತ್ತಷ್ಟು ನೆರವು ನೀಡಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.
ಆಕ್ಸಿಜನ್ ಮತ್ತು ರೆಮ್ ಡೆಸಿವಿರ್ ಕೊರತೆ ಇತ್ತು. ಕೇಂದ್ರ ಸರ್ಕಾರ ಅಗತ್ಯವಾದ ರೆಮ್ ಡೆಸಿವಿರ್ ಪೂರೈಕೆಗೆ ಒಪ್ಪಿಗೆ ನೀಡಿದೆ. 1.22 ಲಕ್ಷ ರೆಮ್ ಡೆಸಿವರ್ ಪೂರೈಕೆಗೆ ಒಪ್ಪಿಗೆ ನೀಡಲಾಗಿದ್ದು, 800 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಲಾಗುವುದು. ಹೆಚ್ಚುವರಿಯನ್ನು ಲಸಿಕೆಯನ್ನು ಕೇಂದ್ರ ಪೂರೈಕೆ ಮಾಡಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ. ಇದರ ಫಲಿತಾಂಶ 10 -15 ದಿನದಲ್ಲಿ ಗೊತ್ತಾಗುತ್ತದೆ. ವೀಕೆಂಡ್ ಕರ್ಫ್ಯೂ ಮುಂದುವರೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ. ಅಗತ್ಯವಿದ್ದರೆ ಕರ್ಫ್ಯೂ ಮುಂದುವರೆಸುತ್ತಾರೆ. 15 ದಿನಗಳ ಬಳಿಕ ಸೋಂಕು ಕಡಿಮೆಯಾಗಬಹುದು ಎಂದು ಸದಾನಂದಗೌಡ ತಿಳಿಸಿದ್ದಾರೆ.