ವಿಶ್ವ ವಿಶೇಷ ಚೇತನರ ದಿನಾಚರಣೆಯ ಉದ್ದೇಶಗಳು
* ವಿಶೇಷ ಚೇತನರ ಸಮಸ್ಯೆಗಳನ್ನು ಅರಿಯುವುದು ಮತ್ತು ಇವರ ಆತ್ಮಗೌರವನ್ನು ಹೆಚ್ಚಿಸುವ
ಹಕ್ಕುಗಳನ್ನು ರಕ್ಷಿಸುವ ಮತ್ತು ಇವರ ಒಳಿತಿಗಾಗಿ ಕ್ರಮವಹಿಸುವುದಾಗಿದೆ.
* ವಿಶೇಷ ಚೇತನರನ್ನು ಮುಖ್ಯವಾಹಿನಿಗೆ ಸೇರಿಸುವ ಕುರಿತು ಜಾಗೃತಿ, ಸಮಾನ ಅವಕಾಶ, ಸೌಲಭ್ಯ
ಕಲ್ಪಿಸುವುದು. ವಿಶೇಷ ಚೇತನರಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹಾಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳನ್ನು ಒದಗಿಸುವುದು ಮತ್ತು ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು.
* ಪ್ರತಿ ವರ್ಷದಂತೆ, 2024-25 ನೇ ಸಾಲಿನಲ್ಲಿಯೂ ಡಿಸೆಂಬರ್- 03 ರಂದು ಶಾಲಾ, ಕ್ಲಸ್ಟರ್, ಬ್ಲಾಕ್ ಹಾಗೂ ಜಿಲ್ಲಾ ಹಂತದಲ್ಲಿ ವಿಶ್ವವಿಶೇಷ ಚೇತನರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು.
* ಶಾಲಾ ಹಂತದಲ್ಲಿ ಹಮ್ಮಿಕೊಳ್ಳಬಹುದಾದ ಚಟುವಟಿಕೆಗಳು
ಪೂರ್ವಭಾವಿಯಾಗಿ ಚಟುವಟಿಕೆ/ ಕಾರ್ಯಕ್ರಮಗಳನ್ನು ಯೋಜಿಸಿ, ಅಗತ್ಯ ಸಿದ್ಧತೆಗಳೊಂದಿಗೆಅರ್ಥಪೂರ್ಣವಾಗಿ ಆಚರಿಸುವುದು.
ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿವಿಧ ರೀತಿಯ ನ್ಯೂನ್ಯತೆಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಇಂತಹ ವಿದ್ಯಾರ್ಥಿಗಳಿಗೆ ಕಲಿಕಾ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ನೀಡಬೇಕಾದಸಹಕಾರದ ಕುರಿತು ಅರಿವು ಮೂಡಿಸುವುದು, ಈ ಕುರಿತು ಮುಕ್ತ ಚರ್ಚೆಗೆ ಅವಕಾಶ ಒದಗಿಸುವುದು.
ಶಾಲಾ ಹಂತದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಅವರ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಒದಗಿಸಿ, ಅವರಿಗೆ ಅವಕಾಶ ನೀಡುವುದು. ಉದಾ: ಅವರಲ್ಲಿನ ಕಲೆ, ಸೃಜನಶೀಲತೆ, ನಾವಿನ್ಯತೆ, ಕ್ರೀಡಾ ಕೌಶಲ ಇತ್ಯಾದಿ.
ವಿಶೇಷ ಚೇತರನ್ನು ಗೌರವಿಸುವ, ಸಮಾನ ಅವಕಾಶ ನೀಡುವ ಕುರಿತು ಎಲ್ಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು.