ಬೆಂಗಳೂರು: ಮೊದಲು ಚುನಾವಣೆಯನ್ನು ಎದುರಿಸಲಿ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ಅನೇಕ ಶಾಸಕರು ಸಿಎಂ ಬಗ್ಗೆ ಹೇಳಿಕೆ ನೀಡಿದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮಾತನಾಡಿದ ಶಾಸಕರೆಲ್ಲರೂ ಅಧಿಕಾರಕ್ಕಾಗಿ ಬಂದವರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಶಿಸ್ತು ಗೊತ್ತಿದ್ದವರು ಹೀಗೆಲ್ಲ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಮಲಗಿದ್ದವರೆಲ್ಲ ಈಗ ಎದ್ದಿದ್ದಾರೆ. ಈಗ ಇರುವವರೆಲ್ಲ ಮುಂದಿನ ಶಾಸಕಾಂಗ ಪಕ್ಷದ ಸದಸ್ಯರಲ್ಲ. ಮುಂದಿನ ಎಲೆಕ್ಷನ್ ಬಳಿಕ ಸಿಎಲ್ಪಿ ಸಭೆ ನಡೆಯಲಿದೆ. ಈಗ ಮಾತನಾಡುವವರೆಲ್ಲಾ ಸಭೆಗೆ ಬರಲಿ. ಚುನಾವಣೆಯನ್ನು ಎದುರಿಸಿ ಇವರು ಮತ್ತೆ ಶಾಸಕರಾಗಿ ಬರಬೇಕಿದೆ. ಶಾಸಕರ ಹೇಳಿಕೆಯಿಂದ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ. ಒಳಗೊಳಗೆ ಉರಿದುಕೊಂಡರೆ ನಾವೇನು ಮಾಡಲು ಸಾಧ್ಯವೆಂದು ಹೇಳಿದ್ದಾರೆ.