ಬೆಂಗಳೂರು: ಜೆಡಿಎಸ್ ಸರ್ಕಾರದ ಅವಧಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ಟ್ಯಾಪ್ ಆದಾಗ ಆರ್.ಅಶೋಕ್ ಎಲ್ಲಿಗೆ ಹೋಗಿಇದ್ರು? ಬಿಜೆಪಿ ನಾಯಕರು ಯಾಕೆ ಮಾತನಾಡಲಿಲ್ಲ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಈಗ ಸ್ವಾಮೀಜಿಗಳ ವಿಚಾರವಾಗಿ ಉಗ್ರ ಹೋರಾಟ ಮಾಡ್ತೀವಿ ಎನ್ನುವ ಆರ್.ಅಶೋಕ್, ಬಾಲಗಂಗಾಧರನಾಥ ಸ್ವಾಮೀಜಿ ಮೇಲೆ ಕೇಸ್ ಹಾಕಿದ್ರಲ್ಲ, ಆಗ ಬಿಜೆಪಿಯವರು ಯಾಕೆ ಮಾತನಾಡಿಲ್ಲ? ಆರ್.ಅಶೋಕ್ ಎಲ್ಲಿಗೆ ಹೋಗಿದ್ರು? ಎಂದು ಕೇಳಿದರು.
ಮುಸ್ಲೀಮರಿಗೆ ಮತದಾನದ ಹಕ್ಕು ರದ್ದು ಪಡಿಸಬೇಕು ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿರುವ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈಗಾಗಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಉತ್ತರ ಕೊಟ್ಟಿದ್ದಾರೆ ಎಂದರು.
ನಾನು ಎಲ್ಲಾ ಸ್ವಾಮೀಜಿಗಳಿಗೆ ಒಂದು ಮನವಿ ಮಾಡುತ್ತೇನೆ. ಸಂವಿಧಾನ, ಯಾರ ಹಕ್ಕುಗಳ ಬಗ್ಗೆ, ಜಾತಿಗಳ ಬಗ್ಗೆ ಯಾವುದೇ ಮಾತನಾಡುವುದು ಬೆಡ. ನಮ್ಮದು ಮಾನವ ಧರ್ಮ. ನಮ್ಮದು ಸಂವಿಧಾನ ಎರಡಕ್ಕೂ ಹೆಚ್ಚಿನ ಒತ್ತು ಕೊಟ್ಟು ಹೋಗಬೇಕು. ನಾನು ಸ್ವಾಮೀಜಿಗಳು ಹಾಗೂ ಪೊಲೀಸರುಗೆ ಹೇಳುವುದೇನೆಂದರೆ ಯಾರೂ ಕೂಡ ಕಾನೂನಿಗಿಇಂತ ದೊಡ್ಡವರಲ್ಲ. ನಾನು ಮಾತನಾಡಿದರೂ ಕೇಸ್ ಹಾಕ್ತಾರೆ ಎಂದು ಹೇಳಿದರು.
ಇನ್ನು ನಮ್ಮ ಕಾಂಗ್ರೆಸ್ ಕಚೇರಿ ಹುಡಿಗರ ಮೇಲೂ ಬಿಜೆಪಿ ಸರ್ಕಾರ ಇದ್ದಾಗ ಕೇಸ್ ಹಾಕಿದ್ದಾರೆ. ಅಂದು ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ಟ್ಯಾಪ್ ಬಗ್ಗೆ ಮಾತನಾಡದವರು ಇಇಂದು ಹೋರಾಟ ಮಾಡ್ತೀವಿ ಎನ್ನುತ್ತಿದ್ದಾರೆ. ಸುಮ್ಮನೇ ಒಣ ರಾಜಕಾರಣ ಮಾಡ್ತಿದ್ದಾರೆ. ಬೆಂಕಿ ಹಚ್ಚಿ ಬೀಡಿ ಸೇದ್ಕೋಂಡು ಕೂತಿದ್ದಾರೆ ಎಂದು ಕಿಡಿಕಾರಿದರು.