ಬೆಂಗಳೂರು: ಕೇರಳದಲ್ಲಿ ನನ್ನ ಮೇಲೆ ದೊಡ್ಡ ಪ್ರಯೋಗ ನಡೆಯುತ್ತಿದೆ. ನನ್ನ ವಿರುದ್ಧ ಶತ್ರ ಭೈರವಿ ಯಾಗ ನಡೆಸಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಅಘೋರಿಗಳ ಮೂಲಕ ಈ ಯಾಗ ಮಾಡಿಸುತ್ತಿದ್ದಾರೆ. ಪಂಚ ಬಲಿ ಕೊಡುತ್ತಿದ್ದಾರೆ. 21 ಮೇಕೆ, 3 ಎಮ್ಮೆ, 21 ಕಪ್ಪು ಕುರಿ, 5 ಹಂದಿಗಳನ್ನು ಬಲಿ ಕೊಡುತ್ತಿದ್ದಾರೆ. ನನ್ನ ಮೇಲೆ ದೊಡ್ಡ ಪ್ರಯೋಗ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಈ ಯಾಗ ನಡೆಯುತ್ತಿದೆ. ಯಾವ ಪೂಜೆ, ಯಾರು ಮಾಡುತ್ತಿದ್ದಾರೆ ಎಲ್ಲಾ ಗೊತ್ತಿದೆ. ನನ್ನ, ಸಿಎಂ ಹಾಗೂ ಸರ್ಕಾರದ ವಿರುದ್ಧ ಪೂಜೆ ಮಡುತ್ತಿದ್ದಾರೆ. ಅವರ ಪ್ರಯತ್ನ ನಡೀತಾ ಇದೆ. ನಾವು ನಂಬಿರುವ ದೇವರು ನಮ್ಮನ್ನು ಕಾಪಾಡುತ್ತಾನೆ ಎಂದು ಹೇಳಿದರು.