ಬೆಳಗಾವಿ(ಸುವರ್ಣಸೌಧ): ಭೂ ಪರಿವರ್ತನೆ, ನಕ್ಷೆ ಮಂಜೂರಾತಿ ಪಡೆದುಕೊಳ್ಳದೆ ಅಕ್ರಮವಾಗಿ ನಿರ್ಮಿಸಿದ ಕಂದಾಯ ನಿವೇಶನಗಳ ಮಾರಾಟ ನೋಂದಣಿಯನ್ನು ಕಡ್ಡಾಯವಾಗಿ ಕೈ ಬಿಡಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಎಸ್.ಆರ್. ವಿಶ್ವನಾಥ್ ಅವರ ಪ್ರಸ್ತಾಪಕ್ಕೆ ಉತ್ತರ ನೀಡಿದ ಡಿಸಿಎಂ, ಈಗಾಗಲೇ ಕಂದಾಯ ನಿವೇಶನಗಳ ನಿರ್ಮಿಸಿ ಮಾರಾಟ ಮಾಡುವುದು ಕಾನೂನುಬಾಹಿರ ಎಂದು ಆದೇಶಿಸಲಾಗಿದೆ. ಹೀಗಿದ್ದರೂ ಕೆಲವೆಡೆ ಅಕ್ರಮವಾಗಿ ನಿವೇಶನ ನಿರ್ಮಾಣ ಮಾಡುತ್ತಿದ್ದಾರೆ ಎಂಬುದನ್ನು ಸದಸ್ಯರು ಸದನದ ಗಮನಕ್ಕೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಕಂದಾಯ ನಿವೇಶನಗಳ ನೋಂದಣಿಯನ್ನು ಕೈ ಬಿಡಲಾಗುವುದು. ಯೋಜನಾಬದ್ಧ ಬಡಾವಣೆಗಳ ನಿರ್ಮಾಣ, ನಿವೇಶನಗಳ ಮಾರಾಟಕ್ಕೆ ಮಾತ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.