ಬೆಂಗಳೂರು: ದೇಶದ ಜನ ಬದಲಾವಣೆ ಬಯಸಿದ್ದಾರೆ. ಎಲ್ಲದಕ್ಕೂ ಒಂದು ಕಾಲಘಟ್ಟ ಇರುತ್ತೆ. ಅದು ಬದಲಾಗುತ್ತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರ, ಹರಿಯಾಣ ಚುನಾವಣಾ ಫಲಿತಾಂಶ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ದೇಶದಲ್ಲಿ 12 ವರ್ಷ ಎನ್ ಡಿಎಗೆ ಜನ ಅವಕಾಶ ಕೊಟ್ಟಿದ್ದರು. ಈಗ ಜನರ ಭಾವನೆಗಳಲ್ಲಿ ಬದಲಾವಣೆ ಕಂಡುಬಂದಿದೆ ಎಂದರು.
ಕರ್ನಾಟಕದಿಂದ ನಮ್ಮ ಕಾರ್ಯಕ್ರಮಗಳು ಆರಂಭ ಆಗಿವೆ. ನಾವು ಕೊಟ್ಟ ಯೋಜನೆ, ಕಾರ್ಯಕ್ರಮಗಳನ್ನು ಜನ ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲೂ ಚುನಾವಣೆ ಬರಲಿದೆ. ಇದನ್ನು ಮುಂದಿನ ರಾಜ್ಯಗಳ ಚುನಾವಣೆಗೆ ದಿಕ್ಸೂಚಿ ಎಂದು ಹೇಳಲಾಗಲ್ಲ. ದೇಶದಲ್ಲಿ ಈಗ ಬದಲಾವಣೆಯ ಬೆಳಕು ಆರಂಭವಾಗಿದೆ. ಬದಲಾವಣೆಯೇ ಬೆಳಕು ಎಂದು ಹೇಳಿದರು.
ಇಂಡಿಯಾ ಮೈತ್ರಿಕೂಟ ಪರ ಜನ ಒಲವು ತೋರುತ್ತಿದ್ದಾರೆ. ಹರಿಯಾಣ, ಜಮ್ಮು-ಕಾಶ್ಮೀರದ ಜನತೆಗೆ ಧನ್ಯವಾದಗಳು ಎಂದು ಹೇಳಿದರು.