
ಕೊಡಗು: ಸಚಿವರಿಗೆ ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಹನಿಟ್ರ್ಯಾಪ್ ಆಗಿದ್ದರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಕೊಡಗು ಜಿಲ್ಲೆಯ ಬಾಗಮಂಡಲದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಹನಿ ಟ್ರ್ಯಾಪ್ ಮಾಡುವುದಲ್ಲ, ಹನಿಟ್ರ್ಯಾಪ್ ಆಗುವುದು. ಮಾಡಿದ್ದುಣ್ಣೋ ಮಹಾರಾಯ. ಅವರು ಮಾಡಿದ್ದು, ಅವರಿಗೆ. ಹಾಗೇನಾದರೂ ಆಗಿದ್ದರೆ ದೂರು ನೀಡಲಿ ಎಂದರು.
ಇದೇ ವೇಳೆ ಮುನಿರತ್ನ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಅಧಿವೇಶನದಲ್ಲಿ ಅವರು ಏನು ಮಾಡಿದ್ದಾರೆ ಎಂಬುದು ದೂರಿನಲ್ಲಿ ಇದೆ. ಬಿಜೆಪಿಯವರೇ ಹೇಳಿದ್ದಾರೆ. ಅಶೋಕ್ ಏನೋ ಮಾಡಿದ್ದಾರೆ ಅಂತ ಯಾರಾದರೂ ಸುಮ್ಮ ಸುಮ್ಮನೇ ನಿಮ್ಮ ಹತ್ತಿರಕ್ಕೆ ಬರ್ತಾರಾ? ನೀವು ಹಾಯ್ ಅಂದ್ರೆ ಅವರು ಹಾಯ್ ಅಂತಾರೆ ಎಂದು ತಿರುಗೇಟು ನೀಡಿದರು.