alex Certify ನಾನು ಆ ರೀತಿ ಮಾತನಾಡಬಾರದಿತ್ತು: ಡಿಕೆಶಿ ಬಗ್ಗೆ ಹೇಳಿಕೆ ನೀಡಿ ವಿಷಾದ ವ್ಯಕ್ತಪಡಿಸಿದ ರಮೇಶ ಜಾರಕಿಹೊಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಆ ರೀತಿ ಮಾತನಾಡಬಾರದಿತ್ತು: ಡಿಕೆಶಿ ಬಗ್ಗೆ ಹೇಳಿಕೆ ನೀಡಿ ವಿಷಾದ ವ್ಯಕ್ತಪಡಿಸಿದ ರಮೇಶ ಜಾರಕಿಹೊಳಿ

ಬೆಂಗಳೂರು: ಡಿ.ಕೆ. ಶಿವಕುಮಾರ್ ವಿರುದ್ಧ ನಾನು ಅಸಭ್ಯ ಪದ ಬಳಕೆ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಸಂಜೆ ಸುದ್ದಿಗಾರರೊಂದಿಗೆ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ರಮೇಶ ಜಾರಕಿಹೊಳಿ ಮಾತನಾಡುವ ಭರದಲ್ಲಿ ನಾನು ಗಂಡಸು, ಡಿ.ಕೆ. ಶಿವಕುಮಾರ್ … ಎಂದು ಹೇಳಿದ್ದರು. ಈ ಹೇಳಿಕೆ ಬಗ್ಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ ಈ ಅಸಭ್ಯ ಪದ ಬಳಕೆ ಬಗ್ಗೆ ವಿರೋಧ ವ್ಯಕ್ತವಾಗಿದೆ.

ಇದು ಗಮನಕ್ಕೆ ಬರುತ್ತಲೇ ರಮೇಶ ಜಾರಕಿಹೊಳಿ ಅಸಭ್ಯ ಪದ ಬಳಕೆ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಆ ಪದವನ್ನು ಬಳಸಿದ್ದು ಸರಿಯಲ್ಲ. ಅಸಭ್ಯ ಪದ ಬಳಕೆಯಾಗಿತ್ತು. ನಾನು ಆ ಶಬ್ದ ಮಾತನಾಡಬಾರದಿತ್ತು. ಇದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಈ ಮೂಲಕ ತಾವು ಆಡಿದ ಮಾತನ್ನು ರಮೇಶ ಜಾರಕಿಹೊಳಿ ಹಿಂಪಡೆದುಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...