ಶಿವಮೊಗ್ಗ: ಈ ಡಿ.ಕೆ. ಶಿವಕುಮಾರ್ ಯಾರಿಗೂ ಹೆದರೋ ಮಗ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶಿವಮೊಗ್ಗ ಚಲೋ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಸಿಡಿ ಕೇಸ್ ನಲ್ಲಿ ನನ್ನನ್ನು ಸಿಲುಕಿಸಲು ಬಹಳ ಪ್ರಯತ್ನ ನಡೆಸಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ನಾನು ಸುಮ್ಮನೆ ಇದ್ದರೂ ಸಿಡಿ ಸಿಡಿ ಅಂತಾರೆ. ಏನಾದರೂ ಮಾಡಿ ಡಿಕೆಶಿ ಸಿಕ್ಕಿ ಹಾಕಿಸಬೇಕೆಂದು ಸಂಚು ರೂಪಿಸಲಾಗಿದೆ. ಇನ್ನು ಗೊತ್ತಿಲ್ಲ ಯಾರ್ಯಾರು ಇದ್ದಾರೆ ಎಂಬುದು. ಎಲ್ಲದರ ಬಗ್ಗೆ ಮಾತನಾಡುತ್ತೇನೆ. ಟೈಮ್ ಬಂದಾಗ ಎಲ್ಲವನ್ನೂ ನಾನೇ ಮಾತನಾಡುತ್ತೇನೆ. ಯಾರಿಗೂ ಹೆದರೋ ಮಗ ನಾನಲ್ಲ ಎಂದು ಹೇಳಿದ್ದಾರೆ.