ಉಡುಪಿ: ಸಮ್ಮಿಶ್ರ ಸರ್ಕಾರ ಉಳಿಸಲು ಡಿ.ಕೆ. ಶಿವಕುಮಾರ್ ಪ್ರಯತ್ನಿಸಲಿಲ್ಲ. ಪತನಕ್ಕೆ ಅವರೂ ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಹೆಚ್.ಡಿ. ಕುಮಾರಸ್ವಾಮಿ ಏನಾದರೂ ಹೇಳಿಕೊಳ್ಳಲಿ. ಅವರು ಹಿರಿಯರಿದ್ದಾರೆ. ಆದರೆ, ಅವರು ಇಷ್ಟು ಬೇಗ ಈ ವಿಚಾರ ಹೇಳುತ್ತಿದ್ದಾರೆ ಅಲ್ಲವೇ? ಇನ್ನು ಏನಾದರೂ ಬಾಕಿ ಇದ್ದರೆ ಹೇಳಲಿ ಸಂತೋಷ ಎಂದು ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.