ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ದಿ. ಉದ್ಯಮಿ ಸಿದ್ದಾರ್ಥ್ ಹೆಗಡೆ ಪುತ್ರ ಅಮಾರ್ಥ್ಯ ಹೆಗಡೆ ಅವರ ವಿವಾಹ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮೊಮ್ಮಗ ಅಮಾರ್ಥ್ಯ ಹೆಗಡೆ ಮತ್ತು ಐಶ್ವರ್ಯಾ ಅವರ ಮದುವೆ ಪ್ರೇಮಿಗಳ ದಿನದಂದೇ ನೆರವೇರಲಿದೆ. ಡಿಕೆಶಿ ನಿವಾಸದಲ್ಲಿ ಮೆಹಂದಿ, ಸಂಗೀತ ಕಾರ್ಯಕ್ರಮ ನೆರವೇರಿದ್ದು ಸಂಭ್ರಮ ಸಡಗರ ಮನೆಮಾಡಿದೆ. ಇಂದು ಬೆಳಗ್ಗೆ 9.45 ಮುಹೂರ್ತದಲ್ಲಿ ಮದುವೆ ನೆರವೇರಲಿದ್ದು, ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಫೆಬ್ರವರಿ 17 ರಂದು ಬೆಂಗಳೂರಿನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.