ಹಾವೇರಿ: ಬಿಜೆಪಿ ಸೇರದಿರುವುದಕ್ಕೆ ನನ್ನನ್ನು ಜೈಲಿಗೆ ಹಾಕಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ತಾವು ಮಾಡಿದ ತಪ್ಪಿಗೆ ಮತ್ತು ಅಕ್ರಮಕ್ಕೆ ಜೈಲಿಗೆ ಹೋಗಿ ಬಿಜೆಪಿ ಮೇಲೆ ಆಪಾದನೆ ಮಾಡುತ್ತಿದ್ದಾರೆ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸೇರದವರನ್ನೆಲ್ಲ ಜೈಲಿಗೆ ಕಳಿಸೋಕೆ ಆಗಿದೆಯಾ? ಎಲುಬಿಲ್ಲದ ನಾಲಿಗೆ ಮಾತನಾಡಿದರೆ ಜನ ನಂಬುವಷ್ಟು ದಡ್ಡರಲ್ಲ. ಮಾತನಾಡಬೇಕಾದರೆ ಅರ್ಥ ಇಟ್ಟುಕೊಂಡು ಮಾತನಾಡಬೇಕು ಎಂದು ಹೇಳಿದ್ದಾರೆ.