alex Certify SSLC, PUC ನಂತರ ಉದ್ಯೋಗಾಧಾರಿತ ಡಿ.ಇಡಿ ವಿಶೇಷ ಶಿಕ್ಷಣ ಕೋರ್ಸ್ ತರಬೇತಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SSLC, PUC ನಂತರ ಉದ್ಯೋಗಾಧಾರಿತ ಡಿ.ಇಡಿ ವಿಶೇಷ ಶಿಕ್ಷಣ ಕೋರ್ಸ್ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ: ದಾವಣಗೆರೆಯ ಸಂಯುಕ್ತ ಪ್ರಾದೇಶಿಕ ಕೇಂದ್ರ(ಸಿಆರ್‍ಸಿ) ದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ನಂತರ ಉದ್ಯೋಗ ಆಧಾರಿತ ವಿಶೇಷ ಶಿಕ್ಷಣದಲ್ಲಿ ಶಿಕ್ಷಕರ ತರಬೇತಿ ಕೋರ್ಸ್‍ಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕೋರ್ಸ್‍ಗಳು: ಡಿ. ಇಡಿ. ವಿಶೇಷ ಶಿಕ್ಷಣ (ಐಡಿಡಿ), ಡಿ.ಇಡಿ.ವಿಶೇಷ ಶಿಕ್ಷಣ (ಹೆಚ್‍ಐ) ತರಬೇತಿ ಕೋರ್ಸ್ ಆಗಿದ್ದು, 2 ವರ್ಷ(ಪೂರ್ಣ ಸಮಯ) ತರಬೇತಿಯ ಅವಧಿ ನಿಗದಿಪಡಿಸಲಾಗಿದೆ. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು. ಅಥವಾ ಯಾವುದೇ ಕೇಂದ್ರ ಮತ್ತು ರಾಜ್ಯ ಪರೀಕ್ಷಾ ಮಂಡಳಿಯಿಂದ ಮಾನ್ಯತೆ ಪಡೆದ ಸ್ಟ್ರೀಮ್‍ನಲ್ಲಿ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು. ಎಸ್.ಸಿ., ಎಸ್.ಟಿ, ಒಬಿಸಿ, ವಿಕಲಚೇತನ. ಇಡಬ್ಲ್ಯೂಎಸ್ ವರ್ಗಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ಅನ್ವಯವಾಗುತ್ತದೆ.

ಅರ್ಜಿಯನ್ನು https://rciapproval.org/rci admission/ ಆನ್‍ಲೈನ್ ಮೂಲಕ ವೆಬ್‍ಸೈಟ್‍ನಲ್ಲಿ ಸಲ್ಲಿಸಬಹುದು. ಆನ್‍ಲೈನ್ ನೊಂದಾಣಿಗಾಗಿ ನ. 11 ಕೊನೆಯ ದಿನಾಂಕವಾಗಿರುತ್ತದೆ. ಪ್ರವೇಶ ಪ್ರಕ್ರಿಯೆ ನ. 16 ರಿಂದ ಆರಂಭವಾಗಲಿದೆ.

ಸಂಯುಕ್ತ ಪ್ರಾದೇಶಿಕ ಕೇಂದ್ರ, ದಾವಣಗೆರೆ ಕೇಂದ್ರದ ಕೋಡ್ ಕೆಕೆ 044 ಆಗಿದೆ. ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ.,  ಒಬಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇಡಬ್ಲ್ಯೂಎಸ್ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 350 ರೂ. ನಿಗದಿಪಡಿಸಲಾಗಿದೆ. ವಿವಿಧ ಪೇ ಆ್ಯಪ್ ಗಳ ಯುಪಿಐ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08192-233464/465, 8746043062, 8610660894 ಮತ್ತು 9490020080 ಅಥವಾ ಇ-ಮೇಲ್- director.crcdvg@gmail.com, ವೆಬ್‍ಸೈಟ್ https://crcdvg.nic.in ಗೆ ಸಂಪರ್ಕಿಸಬಹುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...