alex Certify ವಿಚಿತ್ರ ಕಳ್ಳ ಮನೆಗೆ ನುಗ್ಗಿ ಮಾಡುತ್ತಾನೆ ಇಂಥಾ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ ಕಳ್ಳ ಮನೆಗೆ ನುಗ್ಗಿ ಮಾಡುತ್ತಾನೆ ಇಂಥಾ ಕೆಲಸ

ಜಗತ್ತಿನಲ್ಲಿ ಎಂತೆಂಥಾ ವಿಚಿತ್ರ ಕಳ್ಳರಿದ್ದಾರೆ ಎಂದರೆ ಅಚ್ಚರಿಯೆನಿಸುತ್ತದೆ. ಕಳ್ಳತನ ಮಾಡಲು ಮನೆಗಳಿಗೆ ನುಗ್ಗುವ ಕಳ್ಳನೊಬ್ಬ ನಿದ್ರಾವಸ್ಥೆಯಲ್ಲಿ ಜನರನ್ನು ನೋಡುವ ವಿಚಿತ್ರ ಘಟನೆ ಜೆಕ್ ಗಣರಾಜ್ಯದಲ್ಲಿ ನಡೆದಿದೆ. ಈ ವಿಚಿತ್ರ ಆಸಾಮಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವರದಿಯ ಪ್ರಕಾರ, ಕಳ್ಳನೊಬ್ಬ ದೇಶದ ರಾಜಧಾನಿ ಪ್ರೇಗ್‌ನಲ್ಲಿ ಹಲವಾರು ಮನೆಗಳಿಗೆ ನುಗ್ಗಿದ್ದಾನೆ. ಉದ್ದೇಶಪೂರ್ವಕವಾಗಿ ಅಂತಹ ಮನೆಗಳನ್ನು ಮಾತ್ರ ಆಯ್ಕೆ ಮಾಡುತ್ತಾನೆ. ಈವರೆಗೆ ಪೊಲೀಸರು ಏಳು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಕಳ್ಳ ಮಾತ್ರ ಪತ್ತೆಯಾಗಿಲ್ಲ.

ಇನ್ನು, ಈ ಕಳ್ಳ ಜನರ ಉಪಸ್ಥಿತಿಗೂ ಕ್ಯಾರೆ ಅನ್ನುವುದಿಲ್ಲವಂತೆ. ಸಿಸಿ ಟಿವಿ ಅಳವಡಿಸಿರುವ ಮನೆಗಳನ್ನೂ ಈತ ಕೇರ್ ಮಾಡುವುದಿಲ್ಲ. ವಿಚಿತ್ರ ಅಂದರೆ, ಆತ ಅಂತಹ ಮನೆಗಳನ್ನೇ ಹುಡುಕುತ್ತಾನಂತೆ. ಇನ್ನೊಂದು ಪ್ರಕರಣದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳ, ಮನೆ ಮಾಲೀಕರ ಒಂಭತ್ತು ವರ್ಷದ ಮಗಳು ಮಲಗಿದ್ದರೆ, ಆಕೆಯ ಪಕ್ಕದಲ್ಲಿ ಹಾಸಿಗೆಯ ಮೇಲೆ ಕುಳಿತಿದ್ದ ಎನ್ನಲಾಗಿದೆ. ಮನೆಯ ಸುತ್ತ ಶಂಕಿತ ವ್ಯಕ್ತಿಯ ಚಲನವಲನವನ್ನು ಕೆಲವು ಮನೆ ಮಾಲೀಕರು ಗಮನಿಸಿದ್ದಾರೆ.

ಶಂಕಿತ ವ್ಯಕ್ತಿಗೆ 55 ರಿಂದ 60 ವರ್ಷ ವಯಸ್ಸಾಗಿರಬಹುದು ಎನ್ನಲಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರೇಗ್‌ನಲ್ಲಿ ಒಂದು ವರ್ಷದಲ್ಲಿ ಎರಡು ಬಾರಿ ಒಂದೇ ಮನೆಯ ಕಳ್ಳತನ ಮಾಡಿರೋ ಆರೋಪ ಆತನ ಮೇಲಿದೆ. ಅಪರಾಧ ಸಾಬೀತಾದರೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...