ಝೆಕ್ ಗಣರಾಜ್ಯದ ಫ್ರೀ ಡೈವರ್ ಡೇವಿಡ್ ವೆನ್ಸಲ್ ವೆಟ್‌ಸೂಟ್ ಧರಿಸದೇ ಹಿಮದ ತಳದಲ್ಲಿ 50 ಮೀಟರ್ ಆಳಕ್ಕೆ ಧುಮುಕುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
40 ವರ್ಷ ವಯಸ್ಸಿನ ಡೇವಿಡ್ ಒಂದೇ ಉಸಿರಿನಲ್ಲಿ 52.1 ಮೀಟರ್‌ನಷ್ಟು ಆಳಕ್ಕೆ ಜಿಗಿದಿದ್ದಾರೆ. ಹಿಮದಲ್ಲಿ ಕೊರೆಯಲಾದ ರಂಧ್ರವೊಂದರ ಮೂಲಕ 170.9 ಮೀಟರ್ ಆಳದಲ್ಲಿ ಅಂಟಿಸಲಾಗಿದ್ದ ಸ್ಟಿಕರ್ ಒಂದನ್ನು ಮರಳಿ ತರುವ ಮೂಲಕ ಡೇವಿಡ್ ಈ ಅದ್ಭುತ ಸಾಧಿಸಿದ್ದಾರೆ.
ಈ ರಂಧ್ರದೊಳಗೆ ಡೈವ್ ಮಾಡಿದ 1 ನಿಮಿಷ 54 ಸೆಕೆಂಡ್‌ಗಳ ಬಳಿಕ ಮೇಲೆದ್ದು ಬಂದ ಡೇವಿಡ್ ಶಾಂಪೆನ್ ಬಾಟಲಿ ತೆರೆಯುವ ಮೂಲಕ ತಮ್ಮ ಈ ಅಮೋಘ ಸಾಧನೆಯನ್ನು ಆಚರಿಸಿದ್ದಾರೆ.
ಆದರೆ ಇದಕ್ಕೂ ಮುನ್ನ ಸ್ವಲ್ಪ ರಕ್ತ ಕೆಮ್ಮಿಕೊಂಡ ಡೇವಿಡ್, ಒಂದು ನಿಮಿಷ ಕುಳಿತುಕೊಂಡು ವಿಶ್ರಾಂತಿ ಪಡೆದಿದ್ದಾರೆ. ಕೂಡಲೇ ಡೇವಿಡ್ ರನ್ನುಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಗಂಭೀರವಾದ ಪರಿಣಾಮಗಳೇನೂ ಆಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
“ಆತನಿಗೆ ತಣ್ಣನೆಯ ನೀರಿನಲ್ಲಿ ಇರುವುದಕ್ಕೆ ಕಷ್ಟವೇನಲ್ಲ. ಅವರಿಗೆ ಆಮ್ಲಜನಕದ ಕೊರತೆ ಅಸಹಜವಾದದ್ದೇನಲ್ಲ. ಆದರೆ ಈ ವಿಚಾರ ಸಂಪೂರ್ಣ ಭಿನ್ನವಾಗಿದ್ದು ಏಕೆಂದರೆ ತಣ್ಣನೆಯ ನೀರಿನಲ್ಲಿ ನಿಮ್ಮ ಕಿವಿಗಳ ಮೇಲೆ ಬೀಳುವ ಒತ್ತಡದಲ್ಲಿರುವ ಅನುಭವ ಸಂಪೂರ್ಣ ಭಿನ್ನವಾದದ್ದು. ಕೊರೆಯುವ ನೀರು ಮತ್ತು ಆಮ್ಲಜನಕದ ಕೊರತೆಗಳ ನಡುವೆ ಒತ್ತಡದಲ್ಲಿರಬೇಕಾದದ್ದು ಒಂದು ಭಿನ್ನಾತಿಭಿನ್ನ ಅನುಭವವಾಗಿದೆ,” ಎನ್ನುತ್ತಾರೆ ಸಹ ಡೈವರ್ ಪಾವೆಲ್ ಕಾಲಸ್.
ಡೇವಿಡ್‌ರ ಸಾಹಸದ ಸಂದರ್ಭದಲ್ಲಿ ಆ ಪ್ರದೇಶದ ತಾಪಮಾನವು 1 ರಿಂದ 4 ಡಿಗ್ರಿಯಷ್ಟಿದ್ದು, ಗಾಳಿಯ ತಾಪಮಾನವು 4.4 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.
ಇದಕ್ಕೂ ಮುನ್ನ, 2021ರಲ್ಲಿ ಝೆಕ್‌ನ ಮತ್ತೊಂದು ಹಿಮಾಚ್ಚಾದಿತ ಕೆರೆಯೊಳಗೆ 265 ಅಡಿ ಆಳಕ್ಕೆ ಜಿಗಿದಿದ್ದ ಡೇವಿಡ್, ಮತ್ತೊಂದು ಗಿನ್ನೆಸ್ ದಾಖಲೆ ನಿರ್ಮಿಸಿದ್ದರು.