alex Certify ಮಿಸ್ತ್ರಿ ಕಾರು ಅಪಘಾತ: ಮರ್ಸಿಡಿಸ್ ತಂಡದಿಂದ ಡೇಟಾ ಸಂಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಸ್ತ್ರಿ ಕಾರು ಅಪಘಾತ: ಮರ್ಸಿಡಿಸ್ ತಂಡದಿಂದ ಡೇಟಾ ಸಂಗ್ರಹ

ಕೈಗಾರಿಕೋದ್ಯಮಿ ಸೈರಸ್​ ಮಿಸ್ತ್ರಿ ರಸ್ತೆ ಅಪಘಾತವು ಆಟೋಮೊಬೈಲ್​ ಕ್ಷೇತ್ರದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಐಷಾರಾಮಿ ಕಾರು ಅಪಘಾತಕ್ಕೀಡಾದ ಬಳಿಕ ಕಾರಿನಲ್ಲಿ ಹಿಂದಿನ ಸೀಟಿನಲ್ಲಿ ಕುಳಿತವರು ಮೃತರಾಗುತ್ತಾರೆಂದರೆ ಕಾರು ಎಷ್ಟು ಸೇಫ್ ಎಂಬೆಲ್ಲ ಚರ್ಚೆಗಳು ನಡೆದಿವೆ.

ಈ ನಡುವೆ ಜರ್ಮನಿಯ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್ -ಬೆನ್ಜ್​ನ ತಂಡವು ಮಿಸ್ತ್ರಿ ಅಪಘಾತಕ್ಕೊಳಗಾದ ವಾಹನದ ಡೇಟಾವನ್ನು ಸಂಗ್ರಹಿಸಿದೆ. ಹೆಚ್ಚಿನ ವಿಶ್ಲೇಷಣೆಗಾಗಿ ಡೇಟಾವನ್ನು ಡೀಕ್ರಿಪ್ಟ್​ ಮಾಡಲಾಗುವುದು. ಕಾರಿನ ಟೈರ್​ ಒತ್ತಡ ಮತ್ತು ಬ್ರೇಕ್​ ಆಯಿಲ್​ ಸೇರಿ ಇತರ ವಿವರಗಳ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಮರ್ಸಿಡಿಸ್ ಕಂಪನಿಯ ಅಧಿಕಾರಿಗಳು ಭೇಟಿ ನೀಡಿ ಎನ್​ಕ್ರಿಪ್ಟ್​ ಮಾಡಲಾದ ಡೇಟಾವನ್ನು ಸಂಗ್ರಹಿಸಿದ್ದಾರೆ. ಡೇಟಾವನ್ನು ವಿಶ್ಲೇಷಿಸಲಾಗುತ್ತದೆ, ಡೀಕ್ರಿಪ್ಟ್​ ಮಾಡಲಾಗುತ್ತದೆ ಮತ್ತು ಹೆಚ್ಚಿನ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದು ತನಿಖೆಗೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಡಿಮೆ ಬ್ರೇಕ್​ ಆಯಿಲ್​ ಬ್ರೇಕ್​ ಲೈನ್​ನಲ್ಲಿ ಗಾಳಿ ತುಂಬಲು ಕಾರಣವಾಗುತ್ತದೆ, ಇದು ಬ್ರೇಕ್​ ಹಾಕುವುದರ ಮೇಲೆ ಪರಿಣಾಮ ಬೀರುತ್ತದೆ, ಇದು ಅಪಾಯಕಾರಿ ಎಂದು ಅಧಿಕಾರಿ ಹೇಳಿದರು.

ಮಹಾರಾಷ್ಟ್ರದ ನೆರೆಯ ಪಾಲ್ಘರ್​ ಜಿಲ್ಲೆಯಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದಿದ್ದರಿಂದ ಮಿಸ್ತ್ರಿ (54) ಮತ್ತು ಅವರ ಸ್ನೇಹಿತ ಜಹಾಂಗೀರ್​ ಪಾಂಡೋಲೆ ಭಾನುವಾರ ಮಧ್ಯಾಹ್ನ ಸಾವನ್ನಪ್ಪಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...