ಡೆಲ್ಟಾ ಮತ್ತು ಒಮಿಕ್ರಾನ್ ಸಂಯೋಜನೆಯ ಕೋವಿಡ್ -19 ಸೋಂಕು ಸೈಪ್ರಸ್ ನಲ್ಲಿ ಕಂಡು ಬಂದಿದೆ. ಸೈಪ್ರಸ್ ವಿಶ್ವವಿದ್ಯಾನಿಲಯದ ಜೈವಿಕ ವಿಜ್ಞಾನಗಳ ಪ್ರಾಧ್ಯಾಪಕ, ಜೈವಿಕ ತಂತ್ರಜ್ಞಾನ ಮತ್ತು ಆಣ್ವಿಕ ವೈರಾಲಜಿಯ ಪ್ರಯೋಗಾಲಯದ ಮುಖ್ಯಸ್ಥ ಲಿಯೊಂಡಿಯೊಸ್ ಕೊಸ್ಟ್ರಿಕಿಸ್ ಪ್ರಕಾರ, ಡೆಲ್ಟಾ ಮತ್ತು ಒಮಿಕ್ರಾನ್ ಅನ್ನು ಸಂಯೋಜಿಸುವ ಕೋವಿಡ್ -19 ನ ತಳಿ ಸೈಪ್ರಸ್ ನಲ್ಲಿ ಕಂಡುಬಂದಿದೆ.
ಪ್ರಸ್ತುತ ಒಮಿಕ್ರಾನ್ ಮತ್ತು ಡೆಲ್ಟಾ ಸಹ-ಸೋಂಕುಗಳಿವೆ. ಈ ಎರಡರ ಸಂಯೋಜನೆಯನ್ನು ನಾವು ಕಂಡುಕೊಂಡಿದ್ದೇವೆ ಎಂದು ಸಂದರ್ಶನವೊಂದರಲ್ಲಿ ಕೊಸ್ಟ್ರಿಕಿಸ್ ಹೇಳಿದ್ದಾರೆ.
ಡೆಲ್ಟಾ ಜೀನೋಮ್‌ಗಳಲ್ಲಿ ಒಮಿಕ್ರಾನ್ ತರಹದ ಆನುವಂಶಿಕ ಸಹಿಗಳನ್ನು ಗುರುತಿಸುವುದರಿಂದ ಆವಿಷ್ಕಾರಕ್ಕೆ ‘ಡೆಲ್ಟಾಕ್ರಾನ್’ ಎಂದು ಹೆಸರಿಸಲಾಗಿದೆ
ಕೋಸ್ಟ್ರಿಕಿಸ್ ಮತ್ತು ಅವರ ತಂಡವು ಅಂತಹ 25 ಪ್ರಕರಣಗಳನ್ನು ಗುರುತಿಸಿದೆ. ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಯು ಆಸ್ಪತ್ರೆಗೆ ದಾಖಲಾಗದ ರೋಗಿಗಳಿಗೆ ಹೋಲಿಸಿದರೆ ಕೋವಿಡ್ -19 ನಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಸಂಯೋಜಿತ ಸೋಂಕಿನ ಸಾಪೇಕ್ಷ ಆವರ್ತನ ಹೆಚ್ಚಾಗಿರುತ್ತದೆ ಎಂದು ತೋರಿಸಿದೆ.
ಜನವರಿ 7 ರಂದು 25 ಡೆಲ್ಟಾಕ್ರಾನ್ ಪ್ರಕರಣಗಳ ಅನುಕ್ರಮವನ್ನು ವೈರಸ್‌ನಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚುವ ಅಂತರರಾಷ್ಟ್ರೀಯ ಡೇಟಾಬೇಸ್ GISAID ಗೆ ಕಳುಹಿಸಲಾಗಿದೆ.
ಈ ತಳಿಯು ಹೆಚ್ಚು ರೋಗಶಾಸ್ತ್ರೀಯವಾಗಿದೆಯೇ? ಹೆಚ್ಚು ಸಾಂಕ್ರಾಮಿಕವಾಗಿದೆಯೇ? ಡೆಲ್ಟಾ ಮತ್ತು ಓಮಿಕ್ರಾನ್ ಮೇಲೆ ಅದು ಮೇಲುಗೈ ಸಾಧಿಸುತ್ತದೆಯೇ ಎಂದು ನಾವು ಭವಿಷ್ಯದಲ್ಲಿ ನೋಡುತ್ತೇವೆ ಎಂದು ಅವರು ಹೇಳಿದ್ದಾರೆ. ಆದರೆ, ಅವರ ವೈಯಕ್ತಿಕ ಅಭಿಪ್ರಾಯವೆಂದರೆ ಈ ತಳಿಯು ಹೆಚ್ಚು ಸಾಂಕ್ರಾಮಿಕ ಒಮಿಕ್ರಾನ್ ವೇರಿಯನ್ ನಿಂದ ಸ್ಥಳಾಂತರವಾಗುದೆ ಎನ್ನಲಾಗಿದೆ.