ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಚನ್ನೇಶಪುರದಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆಗೆ ಬೆಂಕಿ ತಗುಲಿದ್ದು, ಭಾರಿ ದುರಂತ ತಪ್ಪಿದೆ.
ಮನೆಗೆ ಬೆಂಕಿ ತಗುಲಿದ್ದು, ತಾಯಿ, ಮಗ ಅದೃಷ್ಟವಶಾತ್ ಪಾರಾಗಿದ್ದಾರೆ. ಚನ್ನೇಶಪುರ ಗ್ರಾಮದ ಕಾಶಪ್ಪ ಅವರ ಮನೆಯಲ್ಲಿ ಘಟನೆ ನಡೆದಿದೆ. ಸಿಲಿಂಡರ್ ಪೈಪ್ ನಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡ ಕೂಡಲೇ ತಾಯಿ, ಮಗ ಹೊರಗೆ ಓಡಿ ಬಂದಿದ್ದಾರೆ.
ಕಾಶಪ್ಪ ಮತ್ತು ಅವರ ತಾಯಿ ಹೊರಬಂದ ಎರಡೇ ನಿಮಿಷದಲ್ಲಿ ಸಿಲಿಂಡರ್ ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಇಭಾರಿ ಬೆಂಕಿ ತಗುಲಿದ್ದು, ಇಡಿ ಮನೆ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ನಡೆಸಿದ್ದಾರೆ. ಸ್ಪೋಟ, ಬೆಂಕಿಯಿಂದಾಗಿ ಇಡೀ ಮನೆ ಸುಟ್ಟು ನಾಶವಾಗಿದೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.