ನವದೆಹಲಿ: ಗುಲಾಬ್ ಚಂಡಮಾರುತದ ತೀವ್ರತೆ ಕಮ್ಮಿಯಾಗುತ್ತಿದ್ದಂತೆ ಇದೀಗ ಅಕ್ಟೋಬರ್ 1 ರಂದು ಶಾಹೀನ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುಲಾಬ್ ಚಂಡಮಾರುತ ಅರಬ್ಬೀ ಸಮುದ್ರದತ್ತ ತೆರಳಿದ್ದು, ಇದು ಶಾಹೀನ್ ಚಂಡಮಾರುತವಾಗಿ ಮರುರೂಪ ಪಡೆದು ಅಪ್ಪಳಿಸುವ ಸಾಧ್ಯತೆಯಿದೆ. ಶಾಹೀನ್ ಚಂಡಮಾರುತವು ದೇಶದ ಹಲವು ರಾಜ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಕರ್ನಾಟಕದ ಮೇಲೂ ಇದರ ಪ್ರಭಾವ ಇರಲಿದೆ. ರಾಜ್ಯದ ಕರಾವಳಿ ಉತ್ತರ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯ ಆರ್ಡರ್ ಕ್ಯಾನ್ಸಲ್ ಮಾಡಿದ ಭಾರತದ ಖಾಸಗಿ ಆಸ್ಪತ್ರೆಗಳು
ಇನ್ನು ಮೀನುಗಾರರನ್ನು ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ. ಸಮುದ್ರದಲ್ಲಿರುವ ಮೀನುಗಾರರು ಬುಧವಾರ ಸಂಜೆ ವೇಳೆಗೆ ಸುರಕ್ಷಿತ ಸ್ಥಳಗಳಿಗೆ ಮರಳುವಂತೆ ಸೂಚಿಸಲಾಗಿದೆ.