ನವದೆಹಲಿ: ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್ ನಲ್ಲಿ ‘ತೌಕ್ತೆ’ ಚಂಡಮಾರುತ ಅಬ್ಬರ ಕಡಿಮೆಯಾಗಿದೆ. ‘ತೌಕ್ತೆ’ ಚಂಡಮಾರುತದಿಂದ ಅನೇಕ ರಾಜ್ಯಗಳು ತತ್ತರಿಸಿದ ಬೆನ್ನಲ್ಲೇ ಪೂರ್ವ ಕರಾವಳಿಗೆ ‘ಯಾಸ್’ ಚಂಡಮಾರುತ ಆತಂಕ ಆರಂಭವಾಗಿದೆ.
ಪಶ್ಚಿಮ ಬಂಗಾಳ, ಒಡಿಶಾ, ತಮಿಳು ನಾಡು, ಆಂಧ್ರ ಪ್ರದೇಶ, ಅಸ್ಸಾಂ, ಅಂಡಮಾನ್ ನಿಕೋಬಾರ್ ಸೇರಿದಂತೆ ಪೂರ್ವ ಕರಾವಳಿಯ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಂಡಮಾರುತ ಆತಂಕ ಮೂಡಿದೆ. ಮೇ 23 ರಂದು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ಇದು ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದ್ದು, ಮೇ 26 ರ ವೇಳೆಗೆ ಒಡಿಶಾ ಮತ್ತು ಪಶ್ಚಿಮ ಬಂಗಾಳ ತೀರಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಚಂಡಮಾರುತ ಪ್ರಭಾವದಿಂದಾಗಿ ಅನೇಕ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ. ಮಳೆ ಮತ್ತು ಗಾಳಿಯ ಅಬ್ಬರ ಮೇ 25 ರ ನಂತರ ಜೋರಾಗಲಿದೆ. ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಲಿರುವ ಚಂಡಮಾರುತದ ಒಮನ್ ದೇಶವು ‘ಯಾಸ್’ ಎಂದು ಹೆಸರು ಸೂಚಿಸಿದೆ. ಬಾಂಗ್ಲಾದೇಶ ‘ತೌಕ್ತೆ’ ಚಂಡಮಾರುತ ಎಂದು ನಾಮಕರಣ ಮಾಡಿದೆ.