ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಫೆಂಗಲ್ ಚಂಡಮಾರುತ ತಮಿಳುನಾಡು, ಪುದುಚೆರಿಗೆ ಅಪ್ಪಳಿಸಿದ್ದು, ಬಿರುಗಳಿ ಸಹಿತ ಭಾರಿ ಮಳೆಯಾಗುತ್ತಿದೆ. ಈಗಾಗಲೇ ಚಂಡಮಾರುತದ ಅಬ್ಬರಕ್ಕೆ ಮೂವರು ಸಾವನ್ನಪ್ಪಿದ್ದಾರೆ. ಚನ್ನೈ ಮಹಾನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿವೆ.
ರಸ್ತೆಗಳಲ್ಲಿ ಪ್ರವಾಹದಂತೆ ನೀರು ಉಕ್ಕಿ ಹರಿಯುತ್ತಿದ್ದು, ಬಡಾವಣೆಗಳು ಜಲಾವೃತವಾಗಿವೆ. ಮಳೆಯ ಅಬ್ಬರ, ಚಂಡಮಾರುತದಿಂದ ತಮ್ಮ ಕಾರುಗಳನ್ನು ರಕ್ಷಿಸಿಕೂಳ್ಳಲು ಚೆನ್ನೈನ ಟಿ.ನಗರದ ನಿವಾಸಿಗಳು ಫ್ಲೈಓವರ್ ಮೇಲೆ ಕಾರುಗಳನ್ನು ನಿಲ್ಲಿಸಿಕೊಂಡಿದ್ದಾರೆ.
ಮಳೆ ನೀರು ನುಗ್ಗಿ ಕಾರುಗಳು ಹಾಳಾಗುತ್ತವೆ. ಇದರಿಂದ ಬೇರೆ ದಾರಿ ಕಾಣದೇ ಜಿ.ಎನ್.ಚೆಟ್ಟಿ ರೋಡ್ ಫ್ಲೈ ಓವರ್ ಮೇಲೆ ಪಾರ್ಕಿಂಗ್ ಮಾಡಿದ್ದು, ಫ್ಲೈಓವರ್ ಮೇಲೆ ಇಕ್ಕೆಲಗಳಲ್ಲಿ ಸಾಲು ಸಾಲಾಗಿ ಕಾರುಗಳು ನಿಂತಿವೆ.