ಮುಂಬೈ: ಅರಬ್ಬಿ ಸಮುದ್ರದಲ್ಲಿ (Arabian Sea) ಬಿಪರ್ ಜಾಯ್ ಚಂಡಮಾರುತದ (Cyclone Biparjoy) ಅಬ್ಬರದ ಪರಿಣಾಮ ಮುಂಬೈನಲ್ಲಿ (Mumbai) ನಾಲ್ವರು ಬಲಿಯಾಗಿರುವ ಘಟನೆ ನಡೆದಿದೆ.
ಮುಂಬೈನ ಜುಹು ಕೊಲಿವಾಡಾದಲ್ಲಿ ಸಮುದ್ರಕ್ಕೆ ಇಳಿದ ನಾಲ್ವರು ಬಾಲಕರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಧರ್ಮೇಶ್ ಭುಜಿಯಾ, ಶುಭಂ ಯೋಗೇಶ್ ಭೋಗಾನಿಯಾ ಮತ್ತು ಜಯ್ ರೋಷನ್ ತಜ್ಭರಿಯಾ ಎಂಬ 16 ಮಂದಿಯನ್ನು ಸ್ಥಳೀಯ ಪೊಲೀಸರು ರಕ್ಷಿಸಿ ಕೂಪರ್ ಆಸ್ಪತ್ರೆಗೆ ಕರೆದೊಯ್ದರು. ಒಬ್ಬ ಯುವಕ ಇನ್ನೂ ಕಾಣೆಯಾಗಿದ್ದಾನೆ.
ಪಶ್ಚಿಮ ಉಪನಗರದ ಜುಹು ಕೊಲಿವಾಡಾದಲ್ಲಿ ಈ ಘಟನೆ ನಡೆದಿದ್ದು, ‘ಬಿಪರ್ಜೋಯ್’ ಚಂಡಮಾರುತ ಮತ್ತು ಹೆಚ್ಚಿನ ಉಬ್ಬರವಿಳಿತದಿಂದಾಗಿ ಸಮುದ್ರದ ಪ್ರಕ್ಷುಬ್ಧತೆಯ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಒಟ್ಟು ಎಂಟು ಹುಡುಗರು ಜೆಟ್ಟಿಯ ಆಳವಾದ ತುದಿಗೆ ಹೋಗಿ ಅಲ್ಲಿಯ ಅಂಚಿನಲ್ಲಿ ಕುಳಿತರು. ಮುಂಬೈ ಪೊಲೀಸರ ಪ್ರಕಾರ, ಒಬ್ಬ ಹುಡುಗನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದರೆ, ಇತರ ಮೂವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.