ಎಲೆಕ್ಟ್ರಿಕ್ ಬೈಸಿಕಲ್‌ಗಳ ಬಳಕೆಯು ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಜರ್ಮನಿಯ ಹ್ಯಾನೋವರ್ ಮೆಡಿಕಲ್ ಸ್ಕೂಲ್‌ನ ಸಂಶೋಧಕರು ನಡೆಸಿದ ಅಧ್ಯಯನ ಕಂಡುಹಿಡಿದಿದೆ.
ಅಲ್ಲದೆ ಇದು ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯತೆಯನ್ನು ಕಡಿಮೆ ಮಾಡುತ್ತದೆ. ಎಲೆಕ್ಟ್ರಿಕ್ ಬೈಸಿಕಲ್‌ನ ಬಳಕೆಯು ಸಾಂಪ್ರದಾಯಿಕ ಬೈಸಿಕಲ್‌ನ ಬಳಕೆಯಂತೆ ಆರೋಗ್ಯಕ್ಕೆ ಬಹುತೇಕ ಪ್ರಯೋಜನಕಾರಿಯಾಗಿದೆ.
ಸಾಂಪ್ರದಾಯಿಕ ಬೈಸಿಕಲ್ ಸವಾರಿ ಮಾಡುವುದು ಆರೋಗ್ಯವಾಗಿರಲು ಉತ್ತಮ ಮಾರ್ಗವಾಗಿದೆ. ಯಾವುದೇ ವಯಸ್ಸಿನಲ್ಲಿ, ಎಲೆಕ್ಟ್ರಿಕ್ ಬೈಸಿಕಲ್ ಅನ್ನೂ ಬಳಸುವುದರಿಂದ ಅನೇಕ ಪ್ರಯೋಜನಗಳಿವೆ. ಎಲೆಕ್ಟ್ರಿಕ್ ಬೈಕ್ ಸವಾರಿ ಮಾಡುವುದರಿಂದ ಹೃದಯಾಘಾತದ ಅಪಾಯವನ್ನು ಶೇ.40 ರಷ್ಟು ಕಡಿಮೆ ಮಾಡಬಹುದು. ನಿಯಮಿತ ಚಟುವಟಿಕೆ ಅಂದರೆ ದಿನಕ್ಕೆ 10 ರಿಂದ 15 ಕಿ.ಮೀ ನಡುವೆ ಎಲೆಕ್ಟ್ರಿಕ್ ಬೈಕು ಸವಾರಿ ಮಾಡುವುದರಿಂದ ಕ್ಯಾನ್ಸರ್, ಮಧುಮೇಹ, ಕೊಲೆಸ್ಟ್ರಾಲ್, ಬುದ್ಧಿಮಾಂದ್ಯತೆ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ.
1,250 ಎಲೆಕ್ಟ್ರಿಕ್ ಬೈಕ್ ಸವಾರರು ಮತ್ತು 629 ಸಾಂಪ್ರದಾಯಿಕ ಬೈಕ್ ಬಳಕೆದಾರರ ಡೇಟಾವನ್ನು ಜರ್ಮನ್ ಸಂಶೋಧಕರು ವಿಶ್ಲೇಷಿಸಿದ್ದಾರೆ. ನಾಲ್ಕು ವಾರಗಳ ಅವಧಿಯಲ್ಲಿ ಭಾಗವಹಿಸುವವರು ಧರಿಸಿರುವ ಚಟುವಟಿಕೆ ಟ್ರ್ಯಾಕರ್‌ಗಳನ್ನು ಬಳಸಿಕೊಂಡು ಈ ಡೇಟಾವನ್ನು (ಸೈಕ್ಲಿಂಗ್‌ನಲ್ಲಿ ಕಳೆದ ಸಮಯ, ಪ್ರಯಾಣಿಸಿದ ದೂರ ಮತ್ತು ಹೃದಯ ಬಡಿತ) ಸಂಗ್ರಹಿಸಲಾಗಿದೆ.
ವ್ಯಾಯಾಮದ ಸಮಯದಲ್ಲಿ ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುವುದು. ವಿಶೇಷವಾಗಿ ನಿಮಿಷಕ್ಕೆ 110 ಬೀಟ್ಸ್ ಗಿಂತ ಹೆಚ್ಚು, ನಿಮ್ಮ ಹೃದಯರಕ್ತನಾಳದ ವ್ಯವಸ್ಥೆಯನ್ನು ಬಲಪಡಿಸುತ್ತದೆ. ದೈಹಿಕ ಚಟುವಟಿಕೆಯ ಮಟ್ಟವು ಕಡಿಮೆ ತೀವ್ರವಾಗಿದ್ದರೂ ಸಹ, ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಬಳಸುವುದು ಅವರ ದೈಹಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ವ್ಯಕ್ತಿಯ ಒಟ್ಟಾರೆ ಕಾರ್ಡಿಯೋ ವ್ಯಾಯಾಮಕ್ಕೆ ಕೊಡುಗೆ ನೀಡುತ್ತದೆ ಎಂದೇ ಹೇಳಲಾಗಿದೆ.
ಎಲೆಕ್ಟ್ರಿಕ್ ಬೈಸಿಕಲ್‌ಗಳ ಬಳಕೆಯು ವ್ಯಕ್ತಿಯ ಒಟ್ಟಾರೆ ವ್ಯಾಯಾಮ ಚಟುವಟಿಕೆಗೆ ಕೊಡುಗೆ ನೀಡುತ್ತದೆ. ಅಲ್ಲದೆ ಇದು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಮತ್ತು ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.