
ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ BMRCL ಸಿಹಿ ಸುದ್ದಿ ನೀಡಿದೆ. ಮೆಟ್ರೋದಲ್ಲಿ ಬೈಸಿಕಲ್ ಕೊಂಡೊಯ್ಯಲು ಅವಕಾಶ ನೀಡಲಾಗಿದೆ.
ಬೈಸಿಕಲ್ 15 ಕೆಜಿ ತೂಕ ಮೀರಬಾರದು. ಪ್ರವೇಶದ ವೇಳೆ ಭದ್ರತಾ ತಪಾಸಣೆ ಕಡ್ಡಾಯವಾಗಿರುತ್ತದೆ. ಮಡಚುವ ಸೈಕಲ್ ಕೊಂಡೊಯ್ಯಲು ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ಬಿ.ಎಂ.ಆರ್.ಸಿ.ಎಲ್. ನಿಂದ ಮಾಧ್ಯಮ ಪ್ರಕಟಣೆ ನೀಡಲಾಗಿದೆ.