ಪುಣೆ ಮೂಲದ ಇಗ್ನಿಟ್ರಾನ್ ಮೋಟೋಕಾರ್ಪ್ ಸ್ಟಾರ್ಟ್ಅಪ್ ಕಂಪನಿ ಇದೀಗ ಹೈಸ್ಪೀಡ್ ಸ್ಪೋರ್ಟ್ಸ್ ಬೈಕ್, ಸೈಬರ್ಗ್ GT120 ಅನ್ನು ಅನಾವರಣ ಮಾಡಿದೆ. ಈಗಾಗ್ಲೇ ಎರಡು ಎಲೆಕ್ಟ್ರಿಕ್ ಬೈಕ್ ಗಳನ್ನು ಅನಾವರಣಗೊಳಿಸಿ ಸಂಚಲನ ಮೂಡಿಸಿದ್ದ ಕಂಪನಿಯ ಮೂರನೇ ಗಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನೂತನ ಸೈಬರ್ಗ್ GT 120 ಹೈಸ್ಪೀಡ್ ಸ್ಪೋರ್ಟ್ಸ್ ಬೈಕ್ ಹಲವು ಹೊಸ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಸೈಬರ್ಗ್ GT 120 ಹೈಸ್ಪೀಡ್ ಸ್ಪೋರ್ಟ್ಸ್ ಬೈಕ್ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಒಂದು ಬ್ಲಾಕ್ ಹಾಗೂ ಮತ್ತೊಂದು ಡಾರ್ಕ್ ಪರ್ಪಲ್. 4.68kWH ಲಿಥಿಯಂ ಐಯಾನ್ ಬ್ಯಾಟರಿ ಬಳಸಲಾಗಿದೆ. ಈ ಬೈಕ್ ಗರಿಷ್ಠ ವೇಗ 125kmph. ಒಂದು ಬಾರಿ ಚಾರ್ಜ್ ಮಾಡಿದರೆ 180 ಕಿ.ಮೀ ಮೈಲೇಜ್ ನೀಡಲಿದೆ. ಈ ಬೈಕ್‌ನಲ್ಲಿ ಲೊಕೇಟ್ ಹಾಗೂ ಜಿಯೋಫೆನ್ಸಿಂಗ್, ಬ್ಯಾಟರಿ ಸ್ಟೇಟಸ್, USB ಚಾರ್ಜಿಂಗ್, ಬ್ಲೂಟೂಥ್, ಕೀಲೆಸ್ ಇಗ್ನಿಶನ್(ಸ್ಮಾರ್ಟ್‌ಫೋನ್ ಮೂಲಕ ಕಂಟ್ರೋಲ್ ಮಾಡಬಲ್ಲ ಇಗ್ನಿಶನ್), LED ಡಿಜಿಟಲ್ ಕ್ಲಸ್ಟರ್, ಹಮಾಮಾನ ಹಾಗೂ ಶಾಕ್‌ನಿಂದ ಸಂಪೂರ್ಣ ಸುರಕ್ಷತೆ ನೀಡಬಲ್ಲ ಬ್ಯಾಟರಿ ಪ್ಯಾಕ್ ಹೊಂದಿದೆ.
ಇನ್ನು ಸೈಬರ್ಗ್ GT 120 ಹೈಸ್ಪೀಡ್ ಸ್ಪೋರ್ಟ್ಸ್ ಬೈಕ್ ಚಾರ್ಜಿಂಗ್ ಮನೆಯಲ್ಲಿನ 15Amp ಫಾಸ್ಟ್ ಪ್ಲಗ್ ಸಾಕೆಟ್ ಮೂಲಕ ಮಾಡಿಕೊಳ್ಳಬಹುದು. ಇದರಲ್ಲಿ ಸಂಪೂರ್ಣ ಚಾರ್ಜ್ ಆಗಲು 5 ಗಂಟೆ ತೆಗೆದುಕೊಳ್ಳಲಿದೆ. ಇನ್ನು 3 ಗಂಟೆಯಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಇನ್ನು ಸ್ಪೋರ್ಟ್ಸ್ ಬೈಕ್ 2.5 ಸೆಕೆಂಡ್‌ಗಳಲ್ಲಿ 0-40 ಕಿ.ಮೀ ವೇಗ ಪಡೆದುಕೊಳ್ಳಲಿದೆ.
ರೇಂಜರ್ ಮತ್ತು ವೆನಿಸ್ ಎಂಬ 2 ಎಲೆಕ್ಟ್ರಿಕ್ ವಾಹನಗಳನ್ನ ಬಿಡುಗಡೆ ಮಾಡಿದ ಕೊಮಾಕಿ
GT 120 ಹೈಸ್ಪೀಡ್ ಸ್ಪೋರ್ಟ್ಸ್ ಬೈಕ್‌ನಲ್ಲಿ ಮೂರು ರೈಡಿಂಗ್ ಮೊಡ್‌ಗಳಿವೆ. ಇಕೊ, ನಾರ್ಮಲ್ ಹಾಗೂ ಸ್ಪೋರ್ಟ್ಸ್ ಮೊಡ್‌ಗಳಲ್ಲಿ ರೈಡ್ ಮಾಡಬಹುದು. ಇನ್ನು ರಿವರ್ಸ್ ಗೇರ್, ಪಾರ್ಕಿಂಗ್ ಅಸಿಸ್ಟ್, ಹೆಚ್ಚುವರಿ ಸೌಂಡ್ ಆಯ್ಕೆಯೂ ನೀಡಲಿದೆ. ಮುಂಭಾಗಕ್ಕೆ ಟೆಲಿಸ್ಕೋಪಿಕ್ ಫೋರ್ಕ್, ರೇರ್‌ನಲ್ಲಿ ಮೊನೋ ಶಾಕ್ ಸಸ್ಪೆನ್ಶನ್ ಬಳಸಲಾಗಿದೆ. ಇದರ ಜೊತೆಗೆ 5 ವರ್ಷ ಮೋಟಾರ್, ಬ್ಯಾಟರಿ ಹಾಗೂ ಬೈಕ್ ವಾರೆಂಟಿಯನ್ನು ನೀಡಲಾಗುತ್ತಿದೆ. ಸುರಕ್ಷತೆಯಲ್ಲೂ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಹಲವು ಕಾರಣಗಳಿಂದ ಸೈಬರ್ಗ್ GT 120 ಹೈಸ್ಪೀಡ್ ಸ್ಪೋರ್ಟ್ಸ್ ಗೇಮ್ ಚೇಂಜರ್ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.