ಬೆಂಗಳೂರು: ಬೆಂಗಳೂರು ಟೆಕ್ಕಿಗೆ ಹೊಸ ಮೊಬೈಲ್ ಕಳಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಘಟನೆ ನಡೆದಿದೆ. ಟೆಕ್ಕಿ ಖಾತೆಯಲ್ಲಿದ್ದ 2.80 ಕೋಟಿ ರೂಪಾಯಿಯನ್ನು ಸೈಬರ್ ಖದೀಮರು ವಂಚಿಸಿದ್ದಾರೆ.
ಸಿಮ್ ಖರೀದಿ ವೇಳೆ ಟೆಕ್ಕಿಗೆ ಗಿಫ್ಟ್ ಎಂದು ಹೊಸ ಮೊಬೈಲ್ ಕಳುಹಿಸಲಾಗಿತ್ತು. ಇದನ್ನೇ ನಂಬಿ ಹೊಸ ಮೊಬೈಲ್ ಗೆ ತನ್ನ ಸಿಮ್ ಕಾರ್ಡ್ ಅನ್ನು ಹಾಕಿದ್ದರು. ಆ ಮೊಬೈಲ್ ಗೆ ಕೆಲವು ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿದ್ದ ಸೈಬರ್ ವಂಚಕರು ಮೊಬೈಲ್ ಗೆ ಬರುವ ಒಟಿಪಿ ಅವರಿಗೂ ಸಿಗುವಂತೆ ಸೆಟ್ ಮಾಡಿಕೊಂಡಿದ್ದರು.
ಹೀಗೆ ಟೆಕ್ಕಿ ಎಫ್.ಡಿ.ಯಲ್ಲಿಟ್ಟಿದ್ದ 2.80 ಕೋಟಿ. ರೂ.ಗಳನ್ನು ಖದೀಮರು ದೋಚಿದ್ದಾರೆ. ವೈಟ್ ಫೀಲ್ಡ್ ಸಿಇಎನ್ ಠಾಣೆಗೆ ವಂಚನೆಗೊಳಗಾದ ಟೆಕ್ಕಿ ದೂರು ನೀಡಿದ್ದಾರೆ.