ದೇಶದಲ್ಲಿ ಡಿಜಿಟಲ್ ಮಂತ್ರದ ಜಪ ದಿನೇ ದಿನೇ ಏರುತ್ತಲೇ ಇರುವ ನಡುವೆಯೇ ಸೈಬರ್ ಅಪರಾಧಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿವೆ.
2013ರಲ್ಲಿ ಸೈಬರ್ ಅಪರಾಧದ 5,693 ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ 50,035 ಪ್ರಕರಣಗಳು ಸೈಬರ್ ಕ್ರೈಂ ಸಂಬಂಧ ದಾಖಲಾಗಿವೆ ಎಂದು ’ಕ್ರೈಂ ಇನ್ ಇಂಡಿಯಾ’ ವರದಿಯಿಂದ ತಿಳಿದು ಬಂದಿದೆ.
2019-2020ರ ನಡುವಿನ ಅವಧಿಯಲ್ಲೇ ಸೈಬರ್ ಅಪರಾಧಗಳು 85% ಏರಿಕೆಯಾಗಿದ್ದು, ಸೈಬರ್ ಕ್ರೈಂ ಅಪರಾಧ ಗಂಭೀರವಾದಂತೆ ಕಾಣಿಸಿದೆ.
2019ರಲ್ಲಿ 44,735 ಕೇಸ್‌ಗಳು ದಾಖಲಾಗಿದ್ದು, ಇದಕ್ಕಿಂತ 12%ನಷ್ಟು ಹೆಚ್ಚಿನ ಕೇಸುಗಳು 2020ರಲ್ಲಿ ದಾಖಲಾಗಿವೆ. ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಸಿಕ್ಕೀಂನಲ್ಲಿ ಮಾತ್ರವೇ ಸೈಬರ್ ಅಪರಾಧದ ಯಾವುದೇ ಪ್ರಕರಣ ದಾಖಲಾಗಿಲ್ಲ.
ಕರ್ನಾಟಕದಲ್ಲಿ ಕಳೆದ ವರ್ಷ ಸೈಬರ್ ಕ್ರೈಂ ಸಂಬಂಧ 10,741 ಪ್ರಕರಣಗಳು ದಾಖಲಾದರೆ; 11,097 ಕೇಸುಗಳೊಂದಿಗೆ ಉತ್ತರ ಪ್ರದೇಶ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮಿಕ್ಕಂತೆ ಮಹಾರಾಷ್ಟ್ರ (5,496 ಪ್ರಕರಣಗಳು), ತೆಲಂಗಾಣ (5,024 ಪ್ರಕರಣಗಳು) ನಂತರ ಸ್ಥಾನಗಳಲ್ಲಿ ಇವೆ.
SHOCKING NEWS: ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದ ಮಾದಕ ದಂಧೆ; ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿಯಾದ ಮನೆ
ಪ್ರತಿ ಲಕ್ಷ ಜನಕ್ಕೆ 16.2ರಷ್ಟು ಸೈಬರ್ ಅಪರಾಧದ ಸಾಧ್ಯತೆಗಳು ಕಂಡು ಬಂದಿರುವ ಕರ್ನಾಟಕ ಅಪರಾಧದ ದರದಲ್ಲಿ ಅಗ್ರ ಸ್ಥಾನದಲ್ಲಿದೆ. ದಾಖಲಾದ ಸೈಬರ್ ಅಪರಾಧದ ಕೇಸ್‌ಗಳಲ್ಲಿ 60%ನಷ್ಟು ವಂಚನೆಯ ಉದ್ದೇಶ ಹೊಂದಿರುವಾಗಿದ್ದರೆ, 7%ನಷ್ಟು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿವೆ. 5%ನಷ್ಟು ಪ್ರಕರಣಗಳು ಸುಲಿಗೆ ಸಂಬಂಧ ದಾಖಲಾಗಿವೆ.