ನವದೆಹಲಿ: ಸೈಬರ್ ವಂಚಣೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲೊಂದು ಸೈಬರ್ ವಂಚಕರ ಗ್ಯಾಂಗ್ ಶಿಕ್ಷಕಿಯೊಬ್ಬರಿಗೆ ಕರೆ ಮಾಡಿ ಹೇಳಿದ ಸುಳ್ಳಿಗೆ ಶಾಕ್ ಆದ ಶಿಕ್ಷಕಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಆಗ್ರಾದಲಿ ನಡೆದಿದೆ.
ಆಗ್ರಾದ ಶಾಲಾ ಶಿಕ್ಷಕಿಯೊಬ್ಬರಿಗೆ ಸೈಬರ್ ವಂಚಕರು ಕರೆ ಮಾಡಿ ನಿಮ್ಮ ಮಗಳು ಲೈಂಗಿಕ ಹಗರಣದಲ್ಲಿ ಸಿಲುಕಿದ್ದಾಳೆ ಎಂದು ಸುಳ್ಳು ಹೇಳಿದ್ದಾರೆ. ಇದನ್ನು ಕೇಳಿ ಆಘಾತಕ್ಕೊಳಗಾದ ಶಿಕ್ಷಕಿ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ.
ವಿಷಯ ಬಹಿರಂಗವಾಗಬಾರದು ಎಂದರೆ 1 ಲಕ್ಷ ರೂಪಾಯಿ ಕೊಡಬೇಕು ಎಂದು ಬೆದರಿಕೆ ಹಾಕಿದ್ದರು. ಸೆ.30ರಂದು ಮಧ್ಯಾಹ್ನ 12 ಗಂಟೆಗೆ ವಾಟ್ಸಪ್ ಕಾಲ್ ಮಾಡಿದ್ದ ವಂಚಕರು ಬೆದರಿಕೆ ಹಾಕಿದ್ದಾರೆ. ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಇದರಿಂದ ಅಮ್ಮ ತುಂಭಾ ಭಯಗೊಂಡಿದ್ದರು. ಮಧ್ಯಾಹ್ನದ ಬಳಿಕ ಕೇಳಿದಾಗ ವಿಷಯ ಹೇಳಿದ್ದಾರೆ. ತಕ್ಷಣ ಆ ನಂಬರ್ ನ್ನು ಪೊಲೀಸರಿಗೆ ನೀಡಿದ್ದೆವು ಎಂದು ಮೃತ ಶಿಕ್ಷಕಿ ಮಗ ದೀಪಾಂಶು ತಿಳಿಸಿದ್ದಾರೆ.
ಪೊಲೀಸರು ಪರಿಶೀಲನೆ ನಡೆಸಿ ಇದು ಸೈಬರ್ ವಂಚಕರು ಮಾಡಿರುವ ಕರೆ. ನಿಮ್ಮ ಮಗಳು ಯಾವುದೇ ಸಮಸ್ಯೆಗೂ ಸಿಲುಕಿಲ್ಲ. ಚಿಂತಿಸಬೇಡಿ ಎಂದು ಹೇಳಿದ್ದಾರೆ. ನಾವು ಸಮಾಧಾನಗೊಂಡಿದ್ದೆವು. ಆದರೆ ಅಮ್ಮನಿಗೆ ಶಾಕ್ ನಿಂದ ಹೊರಬರಲು ಆಗಿರಲಿಲ್ಲ. ಆರೋಗ್ಯ ಹದಗೆಡುತ್ತಲೇ ಇತ್ತು. ಶಾಲೆಯಿಂದ ವಾಪಾಸ್ ಆಗಿದ್ದ ಅಮ್ಮ ಎದೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ ಎಂದು ವಿವರಿಸಿದ್ದಾರೆ.