ಬೆಂಗಳೂರು: ಇತ್ತೀಚಿಬ ದಿಬಗಳಲ್ಲಿ ಸೈಬರ್ ವಂಚಕರ ಜಾಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಹಾಯವಣಿ ಹೆಸರಲ್ಲಿ ಕರೆ ಮಾಡಿದ ವ್ಯಕ್ತಿ ಮಹಿಳೆಗೆ 2 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನ ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬ್ಯಾಂಕ್ ಪ್ರತಿನಿಧಿ ಬ್ಯಾಂಕ್ ಸಹಾಯವಾಣಿಯಿಂದ ಕರೆ ಮಾಡುತ್ತಿರುವುದಾಗಿ ಹೆಳಿದ ವಂಚಕ 58 ವರ್ಷದ ಮಹಿಳೆಗೆ ಬರೋಬ್ಬರಿ 2 ಲಕ್ಷ ರೂಪಾಯಿ ವಂಚಿಸಿದ್ದಾನೆ. ನಿಮ್ಮ ಖಾತೆಗೆಯಿಂದ ಬೇರೆ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ. ಈ ಹಣವನ್ನು ನೀವೇ ವರ್ಗಾಸಿದರೆ ಮೂರನ್ನು ಒತ್ತಿ ಇಲ್ಲವದಲ್ಲಿ ಒಂದನ್ನು ಒತ್ತಿ ಎಂದಿದ್ದಾನೆ. ಇದರಿಂದ ಗಾಬರಿಯಾದ ಮಹಿಳೆ ಒಂದನ್ನು ಒತ್ತಿದ್ದಾರೆ. ಬಳಿಕ ವಂಚಕ ನಿಮ್ಮ ಬ್ಯಾಂಕ್ ಮ್ಯಾನೇಜರ್ ಸಂಪರ್ಕಿ ಎಂದು ಕರೆ ಕಟ್ ಮಾಡಿದ್ದಾನೆ.
ಬ್ಯಾಂಕ್ ಗೆತೆರಳಿ ಮಹಿಳೆ ಪರುಸೀಲಿಸಿದಾಗ ಆಕೆ ಅಕೌಂಟ್ ನಿಂದ 2 ಲಕ್ಷ ಹಾ ಡ್ರಾ ಆಗಿದೆ. ತಕ್ಷಣ ಮಹಿಳೆ ರಾಷ್ಟೀಯ ಸೈಬರ್ ಕ್ರೈಮ್ ಸಹಾಯವಾಣಿ (1930) ಗೆ ಕರೆ ಮಾಡಿ ದೂರು ನೀಡಿದ್ದಾರೆ. ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.