alex Certify BIG NEWS: ಪೋಷಣ್ ಆಪ್ ಹೆಸರನಲ್ಲಿಯೂ ಸೈಬರ್ ವಂಚನೆ: ಗರ್ಭಿಣಿಯರು, ಬಾಣಂತಿಯರ ಅಕೌಂಟ್ ಗೆ ಕನ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪೋಷಣ್ ಆಪ್ ಹೆಸರನಲ್ಲಿಯೂ ಸೈಬರ್ ವಂಚನೆ: ಗರ್ಭಿಣಿಯರು, ಬಾಣಂತಿಯರ ಅಕೌಂಟ್ ಗೆ ಕನ್ನ

ಬೆಳಗಾವಿ: ಸೈಬರ್ ವಂಚಕರು ಪೋಷಣ್ ಆಪ್ ಮೂಲಕವೂ ಗಭಿಣಿಯರು, ಬಾಣಂತಿಯರ ಅಕೌಂಟಗೆ ಕನ್ನ ಹಾಕುತ್ತಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಎಚ್ಚರವಹಿಸುವಂತೆ ಬೆಳಗಾವಿ ಪೊಲೀಸರು ಸಾರ್ಜನಕರಿಗೆ ಸಂದೇಶ ರವಾನಿಸಿದ್ದಾರೆ.

ಕೇಂದ್ರ ಸರ್ಕಾರ ಪೋಷಣ್ ಅಭಿಯಾನದ ಹೆಸರಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ವಂಚಿಸುತ್ತಿದ್ದು, ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ಜಾಗೃತರಾಗಿರುವಂತೆ ಹಾಗೂ ಅಪರಿಚಿತ ವ್ಯಕ್ತಿಗಳು ಕಳುಹಿಸುವ ಯಾವುದೇ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ತಿಳಿಸಿದ್ದಾರೆ.

ಸೈಬರ್ ವಂಚಕರು POSHAN TRACKER APP ಹ್ಯಾಕ್ ಮಾಡಿರುವ ಶಂಕೆ ಇದ್ದು, ಅದರ ಮೂಲಕ ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು ಮತ್ತು 6 ವರ್ಷದವರೆಗಿನ ಮಕ್ಕಳ ಮಾಹಿತಿಯನ್ನು ಪಡೆದುಕೊಂದು ವಂಚಿಸುತ್ತಿದ್ದಾರೆ. ಈ ಆಪ್ ಮೂಲಕ ಮಾಹಿತಿ ಸಂಗ್ರಹಿಸಿ ಗರ್ಭಿಣಿಯರಿಗೆ, ಬಾಣಂತಿಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಕರೆಮಾಡಿ ಲಿಂಕ್ ಒಂದನ್ನು ಕಳುಹಿಸಿ ಅದನ್ನು ಕ್ಲಿಕ್ ಮಾಡುವಂತೆ ಹೇಳಿ ಫೋನ್ ಪೇ ಆನ್ ಮಾಡಿ ಇಡಲು ತಿಳಿಸುತ್ತಾರೆ. ಹೀಗೆ ಆನ್ ಮಾಡಿಸಿಕೊಂಡು ನಿಮ್ಮ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸಿಕೊಳ್ಳುತ್ತಾರೆ.

POSHAN TRACKER APPಗೆ ಸಂಬಂಧಿಸಿದ ಯಾವುದೇ ಅನುಮಾನಾಸ್ಪದ ಕರೆಗಳು ಬಂದಲ್ಲಿ ಎಚ್ಚರವಹಿಸಿ. ಯಾವುದೇ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ. ಒಂದು ವೇಳೆ ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣ ಸಿಇಎನ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಥವಾ 1930 ಸಂಖ್ಯೆಗೆ ಕರೆ ಮಾಡಿ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...