alex Certify 35 ನಿಮಿಷಗಳಲ್ಲಿ 23 ಸಾವಿರ ಕಾಗದದ ದೋಣಿ ಮಾಡಿದ ವಿದ್ಯಾರ್ಥಿಗಳಿಂದ ಗಿನ್ನೆಸ್​ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

35 ನಿಮಿಷಗಳಲ್ಲಿ 23 ಸಾವಿರ ಕಾಗದದ ದೋಣಿ ಮಾಡಿದ ವಿದ್ಯಾರ್ಥಿಗಳಿಂದ ಗಿನ್ನೆಸ್​ ದಾಖಲೆ

ಒಡಿಶಾ: ಇಲ್ಲಿಯ ಬಾಲಿ ಯಾತ್ರೆಯಲ್ಲಿ 22 ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಒಟ್ಟಾಗಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಒಡಿಶಾದ ಕಟಕ್‌ನಲ್ಲಿ ನಡೆಯುವ ಐತಿಹಾಸಿಕ ಯಾತ್ರೆಯಲ್ಲಿ ವಿದ್ಯಾರ್ಥಿಗಳು 35 ನಿಮಿಷಗಳಲ್ಲಿ 23 ಸಾವಿರ ಕಾಗದದ ದೋಣಿಗಳನ್ನು ತಯಾರಿಸಿ ದಾಖಲೆ ಬರೆದಿದ್ದಾರೆ. ಸುಮಾರು 2100 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.

ಕಟಕ್ ಮುನ್ಸಿಪಲ್ ಕಾರ್ಪೊರೇಷನ್ (CMC) ಬಾರಾಬತಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ವಿದ್ಯಾರ್ಥಿಗಳು 1304 ಕಾಗದದ ದೋಣಿಗಳನ್ನು ತಯಾರಿಸಿರುವ ಹಿಂದಿನ ದಾಖಲೆಯನ್ನು ಸೋಲಿಸಿದರು. ಈ ಕಾರ್ಯಕ್ರಮದ ಸಿದ್ಧತೆಗೆ ನಗರಸಭೆಯು 30 ಲಕ್ಷ ರೂಪಾಯಿಗಳನ್ನು ಮೀಸಲು ಇರಿಸಿತ್ತು.

ಏತನ್ಮಧ್ಯೆ, ಒಡಿಶಾ ಈ ಹಿಂದೆ ಅಂದರೆ ಆಗಸ್ಟ್ 2, 2019 ರಂದು ಅತಿದೊಡ್ಡ ರಥ ಯಾತ್ರಾ ರಥಕ್ಕಾಗಿ ಮತ್ತೊಂದು ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿತ್ತು. ರಥವು 22 ಮೀಟರ್ x 14 ಮೀಟರ್ x 14 ಮೀಟರ್ ಆಯಾಮವನ್ನು ಹೊಂದುವ ಮೂಲಕ ದಾಖಲೆ ಮಾಡಿದೆ. ಇದನ್ನು ಸಾಧಿಸಿದವರು ಕಿಯೋಂಜಾರ್‌ನ ಡೆಬೋಟರ್‌ನ ಕಾರ್ಯನಿರ್ವಾಹಕ ಅಧಿಕಾರಿ.

ರಥವನ್ನು ನಿರ್ಮಿಸಲು ಸುಮಾರು 100 ದಿನಗಳನ್ನು ತೆಗೆದುಕೊಳ್ಳಲಾಗಿತ್ತು. ಇದಕ್ಕೆ ತಗುಲಿದ್ದ ವೆಚ್ಚ 1 ಕೋಟಿ ರೂಪಾಯಿ. ರಥ ಯಾತ್ರೆಯ ಒಂಬತ್ತು ದಿನಗಳ ಹಬ್ಬವು ಒಡಿಶಾದಲ್ಲಿ ಹಿಂದೂ ದೇವತೆಗಳಾದ ಜಗನ್ನಾಥ, ದೇವಿ ಸುಭದ್ರ ಮತ್ತು ಬಲಭದ್ರ ದೇವರಿಗೆ ಸಮರ್ಪಿತವಾದ ಅತ್ಯಂತ ಜನಪ್ರಿಯ ಆಚರಣೆಯಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...