alex Certify ನರ್ಸ್​ ಕೈಹಿಡಿದು ನರ್ತಿಸಲು ಹೇಳಿದ ಪುಟಾಣಿ ಕ್ಯಾನ್ಸರ್​ ರೋಗಿ: ಭಾವುಕ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನರ್ಸ್​ ಕೈಹಿಡಿದು ನರ್ತಿಸಲು ಹೇಳಿದ ಪುಟಾಣಿ ಕ್ಯಾನ್ಸರ್​ ರೋಗಿ: ಭಾವುಕ ವಿಡಿಯೋ ವೈರಲ್​

ಪುಟ್ಟ ಮಕ್ಕಳು ಏನು ಮಾಡಿದರೂ ಚಂದನೇ. ಅದರಲ್ಲಿಯೂ ಮಕ್ಕಳು ನೃತ್ಯ ಮಾಡಿದರೆ ಅದರ ಸೊಗಸೇ ಬೇರೆ. ಅದೇ ರೀತಿಯ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಆದರೆ ಈ ವಿಡಿಯೋ ನೋಡಿ ಜನರು ಭಾವುಕರಾಗಿದ್ದಾರೆ. ಇದಕ್ಕೆ ಕಾರಣ ಪುಟ್ಟ ಮಗು ನೃತ್ಯ ಮಾಡಿದೆ ಎಂದಲ್ಲ. ಆದರೆ ಕ್ಯಾನ್ಸರ್​ ಪೀಡಿತವಾಗಿರುವ ಈ ಮಗುವಿನ ಭವಿಷ್ಯ ನೆನಪಿಸಿಕೊಂಡು ಜನರು ಗದ್ಗದಿತರಾಗುತ್ತಿದ್ದಾರೆ.

ಪುಟ್ಟ ಪುಟಾಣಿಯೊಬ್ಬನ ವಿಡಿಯೋ ಇದಾಗಿದೆ. ಆಸ್ಪತ್ರೆಯೊಂದರ ಕ್ಯಾನ್ಸರ್​ ವಿಭಾಗದಲ್ಲಿ ಈತ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಲ್ಲಿರುವ ನರ್ಸ್‌ ಒಬ್ಬಳ ಕೈ ಎಳೆದುಕೊಂಡು ತನ್ನ ಜತೆ ನರ್ತಿಸುವಂತೆ ಆತ ಒತ್ತಾಯಿಸುತ್ತಿರುವ ಕ್ಯೂಟ್​ ವಿಡಿಯೋ ಇದಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಗುಡ್ ನ್ಯೂಸ್ ಇದನ್ನು ಶೇರ್​ ಮಾಡಿಕೊಂಡಿದೆ. ಅಂಬೆಗಾಲಿಡುವ ಮಗುವಿನ ಮುದ್ದಾಟ ನೋಡಿ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ಮೊದಲ ಕೆಲವು ಸೆಕೆಂಡುಗಳು ಪುಟಾಣಿ ಅಲ್ಲಿರುವ ಆರೋಗ್ಯ ಕಾರ್ಯಕರ್ತೆಯನ್ನು ಎದ್ದೇಳಲು ಹೇಳುತ್ತಾನೆ. ನಂತರ ನೃತ್ಯ ಮಾಡಲು ಒತ್ತಾಯಿಸುವುದನ್ನು ಇದರಲ್ಲಿ ನೋಡಬಹುದು. ಮೊದಲಿಗೆ ಕಾಲನ್ನುತೋರಿಸಿ ಸ್ಟೆಪ್​ ಹಾಕುವಂತೆ ಹೇಳುವ ಪುಟಾಣಿ ನಂತರ ತನ್ನೊಟ್ಟಿಗೆ ಆಕೆಯನ್ನು ಕರೆದುಕೊಂಡು ಹೋಗುತ್ತಾನೆ.

ಮಹಿಳೆ ತಕ್ಷಣ ಒಪ್ಪಿಕೊಂಡು ಅವನ ಹಿಂದೆ ಕೋಣೆಯ ಇನ್ನೊಂದು ತುದಿಗೆ ನಡೆದಳು. ಮಾತನಾಡಲು ಬರದ ಈ ಪುಟಾಣಿ ಸನ್ನೆಯ ಮೂಲಕವೇ ಹೀಗೆಲ್ಲಾ ಮಾಡಿರುವುದು ನೆಟ್ಟಿಗರನ್ನು ಭಾವುಕರನ್ನಾಗಿಸುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...