
ಕೋತಿಗಳು ಸಾಮಾನ್ಯವಾಗಿ ತಮ್ಮ ಚೇಷ್ಟೆ ಹಾಗೂ ತುಂಟತನದಿಂದಲೇ ಎಲ್ಲಾ ಕಡೆ ಹೆಸರು ಮಾಡಿವೆ. ಇಲ್ಲೊಂದು ಮುದ್ದಾದ ಕಪಿಯೊಂದರ ವಿಡಿಯೋ ವೈರಲ್ ಆಗಿದ್ದು, ಕೋತಿಗಳು ಬರೀ ಮಂಗನಾಟ ಮಾತ್ರವಲ್ಲದೇ ನಮ್ಮ ಹೃದಯ ಗೆಲ್ಲುವ ಕೆಲಸವನ್ನೂ ಮಾಡಬಲ್ಲವು ಎಂದು ಸಾಬೀತು ಪಡಿಸಿದೆ.
ತರಕಾರಿ ಹೆಚ್ಚುತ್ತಿರುವ ಮನೆಯೊಡತಿಗೆ ಸಹಾಯ ಮಾಡುತ್ತಿರುವ ಕೋತಿ ಮರಿಯೊಂದು, ಹುರಳಿಕಾಯಿಯನ್ನು ಅರ್ಧಕ್ಕೆ ತುಂಡು ಮಾಡಿ ಪಾತ್ರೆಯೊಳಗೆ ಇಡುತ್ತಿರುವ ವಿಡಿಯೋ ವೈರಲ್ ಆಗಿದೆ. ಚೆನ್ನಾಗಿ ತರಬೇತಿ ಪಡೆದಂತೆ ಕಾಣುವ ಮಂಗ, ತನ್ನ ಕೆಲಸವನ್ನು ಬಲೇ ಅಚ್ಚುಕಟ್ಟಾಗಿ ಮಾಡುತ್ತಿದೆ.
ಬಾಲಕ ಆಟವಾಡುವಾಗಲೇ ಕಾದಿತ್ತು ‘ದುರ್ವಿಧಿ’
ಈ ವಿಡಿಯೋವನ್ನು ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ಅಮನ್ ಪ್ರೀತ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.