ಶ್ವಾನಗಳೆಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಮನುಷ್ಯರ ಜೊತೆ ಬಹಳ ಬೇಗನೆ ಒಗ್ಗಿಕೊಳ್ಳುವ ನಾಯಿಗಳು ತನ್ನ ಪ್ರಾಣ ಕೊಟ್ಟಾದ್ರೂ ಮಾಲೀಕರನ್ನು ಕಾಪಾಡುವ ನಿಷ್ಠೆ ಹೊಂದಿರುತ್ತದೆ. ಅದರಲ್ಲೂ ಮಕ್ಕಳಿಗೆ, ನಾಯಿಗಳು ಅವರ ಅತ್ಯುತ್ತಮ ಒಡನಾಡಿಗಳಾಗಿವೆ. ಶ್ವಾನಗಳಿಗೂ ಮಕ್ಕಳೆಂದರೆ ಅಚ್ಚುಮೆಚ್ಚು.
ಅನೇಕ ಮನೆಗಳಲ್ಲಿ, ನಾಯಿಗಳು ಮತ್ತು ಶಿಶುಗಳು ಒಟ್ಟಿಗೆ ಬೆಳೆಯುತ್ತವೆ. ಕ್ರಮೇಣ ಅವು ಬಲವಾದ ಮತ್ತು ಭಾವನಾತ್ಮಕ ಬಂಧವನ್ನು ರೂಪಿಸುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋದಲ್ಲಿ, ಮಗುವಿಗೆ ತೆವಳಲು ಸಾಧ್ಯವಿಲ್ಲ ಎಂದು ಅರಿತುಕೊಂಡ ನಂತರ ಶ್ವಾನವು ಕಲಿಸಿಕೊಟ್ಟಿದೆ.
ಕ್ರಾಲಿಂಗ್ ಮಾಡುವುದು ಹೇಗೆ ಎಂಬುದನ್ನು ಶ್ವಾನವು ಮಗುವಿಗೆ ತೋರಿಸಿಕೊಟ್ಟಿದೆ. ಮುಂದೆಯಿಂದ ಶ್ವಾನವು ಕ್ರಾಲಿಂಗ್ ಮಾಡುತ್ತಾ ಸಾಗಿದ್ರೆ, ಹಿಂದಿನಿಂದ ಮಗು ಕೂಡ ತೆವಳುತ್ತಾ ಬಂದಿದೆ. ಮಗು ಶ್ವಾನವು ಯಾವ ರೀತಿ ಮಾಡುತ್ತದೋ ತಾನು ಕೂಡ ಅದೇ ರೀತಿ ಮಾಡಿದೆ.
ಹೋಲ್ಸಮ್ ಮೀಮ್ಸ್ ಎಂಬ ಟ್ವಿಟ್ಟರ್ ಖಾತೆಯು ಈ ವಿಡಿಯೋವನ್ನು ಹಂಚಿಕೊಂಡಿದೆ. ನಾಯಿಯು ಮಗುವಿಗೆ ಹೇಗೆ ಕ್ರಾಲ್ ಮಾಡಬೇಕೆಂದು ಕಲಿಸುತ್ತಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಆ ವಿಡಿಯೋ ವೈರಲ್ ಆಗಿದ್ದು, ಮುದ್ದಾದ ನಾಯಿಯ ವರ್ತನೆಯಿಂದ ನೆಟ್ಟಿಗರು ಪ್ರಭಾವಿತರಾಗಿದ್ದಾರೆ.
https://twitter.com/juli28juta/status/1542677702800441350?ref_src=twsrc%5Etfw%7Ctwcamp%5Etweetembed%7Ctwterm%5E1542677702800441350%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-cute-dog-teaching-baby-how-to-crawl-sweetest-thing-you-will-see-today-5499140%2F
https://twitter.com/JoanK61728179/status/1542773252996710400?ref_src=twsrc%5Etfw%7Ctwcamp%5Etweetembed%7Ctwterm%5E1542773252996710400%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-cute-dog-teaching-baby-how-to-crawl-sweetest-thing-you-will-see-today-5499140%2F