ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ಲಾಸ್ಕ್ ನಲ್ಲಿ ಚಿನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ಬಂಧಿಸಿದ್ದಾರೆ.
ಸೌದಿ ಅರೇಬಿಯಾದ ಜೇದಾ ಏರ್ ಪೋರ್ಟ್ ನಿಂದ ಆಗಮಿಸಿದ್ದ ಪ್ರಯಾಣಿಕ ಚಿನ್ನವನ್ನು ಪೇಸ್ಟ್ ಮಾಡಿ ಪ್ಲಾಸ್ಕ್ ನಲ್ಲಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ. ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಪ್ಲಾಸ್ಕ್ ನಲ್ಲಿ ಚಿನ್ನದ ಪೇಸ್ಟ್ ಇರುವುದು ಪತ್ತೆಯಾಗಿದೆ.
ತಕ್ಷಣ ಪ್ರಯಣಿಕನನ್ನು ವಶಕ್ಕೆ ಪಡೆದ ಅಧಿಕಾರಿಗಳು 7 ಲಕ್ಷ 52 ಸಾವಿರ ಮೌಲ್ಯದ 122 ಗ್ರಾಂ ಚಿನ್ನದ ಪೇಸ್ಟ್ ವಶಕ್ಕೆ ಪಡೆದಿದ್ದಾರೆ.