![](https://kannadadunia.com/wp-content/uploads/2019/11/aadhar_card_1570754870.jpg)
ಶಿವಮೊಗ್ಗ :ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ನಿರ್ದೇಶನಗಳ ಪ್ರಕಾರ 10 ಹೆಚ್.ಪಿ ಮತ್ತು ಅದಕ್ಕಿಂತ ಕಡಿಮೆ ವಿದ್ಯುತ್ ಹೊಂದಿರುವ ನೀರಾವರಿ ಪಂಪ್ಸೆಟ್ ಗ್ರಾಹಕರು ತಮ್ಮ ಸ್ಥಾವರ ಸಂಖ್ಯೆಗೆ ಆಧಾರ್ ಜೋಡಣೆ ಮಾಡಬೇಕಾಗಿರುತ್ತದೆ.
ಆದುದರಿಂದ ಮೆಸ್ಕಾಂ ವ್ಯಾಪಿಯಲ್ಲಿ ಬರುವ ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ 10 ಹೆಚ್.ಪಿ ಮತ್ತು ಅದಕ್ಕಿಂತ ಕಡಿಮೆ ವಿದ್ಯುತ್ ಹೊಂದಿರುವ ನೀರಾವರಿ ಪಂಪ್ಸೆಟ್ ಗ್ರಾಹಕರು ಸಮೀಪದ ಮೆಸ್ಕಾಂ ಉಪವಿಭಾಗ ಕಛೇರಿಯನ್ನು ಸಂಪರ್ಕಿಸಿ ತಮ್ಮ ಸ್ಥಾವರಗಳಿಗೆ ಆಧಾರ್ ಜೋಡಣೆ ಮಾಡಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.