ಭಾರತೀಯ ಅಂಚೆಯ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ತನ್ನ ಎಲ್ಲಾ ಗ್ರಾಹಕರಿಗೂ ತ್ವರಿತ ಹಾಗೂ ವಿಶ್ವಾಸಾರ್ಹ ಆರ್ಥಿಕ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಇತ್ತೀಚಿನ ವರದಿಯೊಂದರ ಪ್ರಕಾರ, ಐಪಿಪಿಬಿಯ ಗ್ರಾಹಕರು ಜನವರಿ 1, 2022ರಿಂದ ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಹಣದ ವಹಿವಾಟು ಮಾಡಿದಲ್ಲಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಐಪಿಪಿಬಿಯಲ್ಲಿ ಮೂರು ಬೇರೆ ರೀತಿಯ ಉಳಿತಾಯ ಖಾತೆಗಳಿವೆ. ಪ್ರತಿಯೊಂದು ಖಾತೆಯೂ ಒಂದಕ್ಕಿಂತ ಭಿನ್ನವಾಗಿವೆ. ಆರ್ಬಿಐ ನಿರ್ಬಂಧಗಳ ಪ್ರಕಾರ ನೀವು ಒಂದು ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ಉಳಿತಾಯ ಬ್ಯಾಂಕ್ ಖಾತೆಯಲ್ಲಿ ಇಡುವಂತಿಲ್ಲ, ಆದರೆ ನೀವು ಅಂಚೆ ಸೇವಾ ಬ್ಯಾಂಕ್ ಖಾತೆಯಲ್ಲಿ ಒಂದು ಲಕ್ಷಕ್ಕಿಂತ ಮೀರಿದ ಯಾವುದೇ ಮೊತ್ತವನ್ನು ಇಡಬಹುದಾಗಿದೆ.
ಉಳಿತಾಯ ಹಾಗೂ ಚಾಲ್ತಿ ಖಾತೆಗಳಲ್ಲಿ 10,000 ರೂ.ಗಳವರೆಗೂ ಅನಿಯಮಿತವಾಗಿ ಠೇವಣಿ ಇಡಬಹುದಾಗಿದೆ. ಇದಾದ ಬಳಿಕ ಖಾತೆಯ 0.5%ನಷ್ಟು, ಕನಿಷ್ಠ 25 ರೂ.ಗೆ ಮಿತಿ ಪಡಿಸಿದಂತೆ ಶುಲ್ಕ ವಿಧಿಸಲಾಗುವುದು. ಇದೇ ರೀತಿ, ಉಳಿತಾಯ ಹಾಗೂ ಚಾಲ್ತಿ ಖಾತೆಗಳಿಂದ ಹಣ ಹಿಂಪಡೆಯುವ ವೇಳೆ ಮಾಸಿಕ ಮಿತಿ 25,000 ರೂ.ಗಳೆಂದು ನಿಗದಿ ಪಡಿಸಲಾಗಿದ್ದು, ಇದಾದ ಬಳಿಕ ನಗದಿನ 0.5%, ವರ್ಗಾವಣೆಯೊಂದರ ಮೇಲೆ ಕನಿಷ್ಠ 25 ರೂ.ನಂತೆ ಚಾರ್ಜ್ ಮಾಡಲಾಗುವುದು.
ಈ ಶುಲ್ಕಗಳು ಜಿಎಸ್ಟಿ ಹೊರತುಪಡಿಸಿ ಇದ್ದು, ಜನವರಿ 1, 2022ರಿಂದ ಚಾಲ್ತಿಗೆ ಬರಲಿವೆ.
ಮೂಲ ಉಳಿತಾಯ ಖಾತೆ
ಮೂಲ ಉಳಿತಾಯ ಖಾತೆಯಲ್ಲಿ ಮಾಡುವ ನಗದು ಠೇವಣಿಗೆ ಯಾವುದೇ ಮೊತ್ತದವರೆಗೂ ಅನಿಯಮಿತವಾಗಿರುತ್ತದೆ. ನಗದು ಹಿಂಪಡೆತವು ನಾಲ್ಕು ಪಾವತಿಗಳವರೆಗೂ ಸ್ವತಂತ್ರವಾಗಿದ್ದು, ಬಳಿಕ ವರ್ಗಾವಣೆ ಮೊತ್ತದ 0.5%, ಕನಿಷ್ಠ ಪ್ರತಿ ಪಾವತಿಗೆ 25 ರೂ.ನಂತೆ ಶುಲ್ಕ ಬೀಳುತ್ತದೆ.