ಪಾಸ್ಬುಕ್ ಪಡೆಯುವ ಸಲುವಾಗಿ ಬ್ಯಾಂಕ್ಗೆ ತೆರಳಿದ್ದ 40 ವರ್ಷದ ರೈಲ್ವೆ ನೌಕರ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಕಾಲಿಗೆ ಫೈರಿಂಗ್ ಮಾಡಿದ್ದಾನೆ. ಬರೇಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಶುಕ್ರವಾರ ಈ ಘಟನೆ ಸಂಭವಿಸಿದ್ದು ವಿಡಿಯೋ ವೈರಲ್ ಆಗಿದೆ.
ಭಾರತೀಯ ರೈಲ್ವೆ ಇಲಾಖೆಯ ಟೆಲಿಕಾಂ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ 40 ವರ್ಷದ ಆಸುಪಾಸಿನ ರಾಜೇಶ್ ರಾಥೋರ್ರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬರೇಲಿ ಪೊಲೀಸ್ ಅಧಿಕಾರಿ ರಮಿತ್ ಶರ್ಮಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ತನಿಖೆ ಮುಂದುವರಿಸಿದ್ದಾರೆ.
ಪ್ರೀತಿಸಿ ಮದುವೆಯಾದ ಜೋಡಿ ಬಾಳಿಗೆ ಕೊಳ್ಳಿಯಿಟ್ಟ ಪೋಷಕರು
ಇನ್ನು ಈ ವಿಚಾರವಾಗಿ ಮಾತನಾಡಿದ ರಾಜೇಶ್ ಪತ್ನಿ ಪ್ರಿಯಾಂಕಾ, ನನ್ನ ಪತಿ ಬರೋಡಾ ಶಾಖೆಯ ಬ್ಯಾಂಕ್ಗೆ ಭೇಟಿ ನೀಡಿದ್ದರು. ಮಾಸ್ಕ್ ಹಾಕದ ಕಾರಣಕ್ಕೆ ಅವರಿಗೆ ಬ್ಯಾಂಕ್ ಒಳಗೆ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿತ್ತು. ಇದಾಗಿ ಕೆಲ ನಿಮಿಷದ ಬಳಿಕ ನನ್ನ ಪತಿ ಮಾಸ್ಕ್ ಧರಿಸಿ ಸ್ಥಳಕ್ಕೆ ಬಂದಿದ್ದರು. ಆದರೆ ಊಟದ ಸಮಯ ಎಂದು ಹೇಳಿ ಮತ್ತೆ ಬ್ಯಾಂಕ್ ಒಳಗೆ ಪ್ರವೇಶ ನೀಡಲಿಲ್ಲ. ಅದಿನ್ನೂ ಬೆಳಗ್ಗೆ 11:30ರ ಸಮಯ. ನನ್ನ ಪತಿಯನ್ನ ದೂಡಿದ ಸೆಕ್ಯೂರಿಟಿ ಗಾರ್ಡ್ ಅವರ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ನನ್ನ ಪತಿಗೆ ಯಾರೂ ಸಹಾಯ ಮಾಡಲಿಲ್ಲ. ನಾನು ಬ್ಯಾಂಕ್ಗೆ ಬರುವ ವೇಳೆಗೆ ನನ್ನ ಪತಿ ನೆಲಕ್ಕೆ ಉರುಳಿ ಒದ್ದಾಡುತ್ತಿದ್ದರು. ನಾನು ಆಟೋದಲ್ಲಿ ಪತಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋದೆ ಎಂದು ಹೇಳಿದ್ದಾರೆ.
ಲಸಿಕೆ ಪಡೆದವರಿಗೆ ಗುಡ್ ನ್ಯೂಸ್: ಕೊರೊನಾದ ಎಲ್ಲಾ ರೂಪಾಂತರಿಗಳ ವಿರುದ್ಧ ಕೋವಿಶೀಲ್ಡ್ – ಕೊವ್ಯಾಕ್ಸಿನ್ ಪರಿಣಾಮಕಾರಿ
ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಬ್ಯಾಂಕ್ ಆಡಳಿತ ಮಂಡಳಿ, ಈ ಘಟನೆಯ ಬಗ್ಗೆ ನಾವು ವಿಷಾದ ವ್ಯಕ್ತಪಡಿಸುತ್ತಿದ್ದೇವೆ. ಸೆಕ್ಯೂರಿಟಿ ಗಾರ್ಡ್ ಹಾಗೂ ರಾಜೇಶ್ ನಡುವಿನ ವಾಗ್ವಾದದಿಂದಾಗಿ ಈ ರೀತಿ ಆಗಿದೆ. ರಾಜೇಶ್ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದೆ.