alex Certify ಈಗಿನ ಟ್ರೆಂಡ್ ಸಿಂಪಲ್ ಹಾಗೂ ಫ್ಯಾಷನಬಲ್‌ “ನೆಕ್ಲೇಸ್‌ ಮಾಂಗಲ್ಯ ಸರ” | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಗಿನ ಟ್ರೆಂಡ್ ಸಿಂಪಲ್ ಹಾಗೂ ಫ್ಯಾಷನಬಲ್‌ “ನೆಕ್ಲೇಸ್‌ ಮಾಂಗಲ್ಯ ಸರ”

ಉದ್ದದ ಮಾಂಗಲ್ಯ ಸರ ಧರಿಸುವವರ ಸಂಖ್ಯೆ ಈಗ ಕಡಿಮೆ ಅಂತಲೇ ಹೇಳಬಹುದು. ಈಗೇನಿದ್ದರೂ ಸಣ್ಣದಾದ ಕುತ್ತಿಗೆಗೆ ನೆಕ್ಲೇಸ್‌ನಂತೆ ಕಾಣುವ ಮಾಂಗಲ್ಯ ಸರ ಟ್ರೆಂಡಿಯಾಗಿದೆ.

ಧರಿಸಲು ಕಂಫರ್ಟ್‌, ನೋಡಲು ಸಿಂಪಲ್ ಹಾಗೂ ಫ್ಯಾಷನಬಲ್‌ ಆಗಿ ಕಾಣುವ ನೆಕ್ಲೇಸ್‌ ಮಾಂಗಲ್ಯ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಕೂಡ ಇವುಗಳನ್ನು ಚೂಸ್ ಮಾಡುತ್ತಿದ್ದಾರೆ. ಯಾಕೆಂದರೆ ಟ್ರಡಿಷನಲ್‌ ಮತ್ತು ಮಾರ್ಡನ್‌ ಉಡುಪಿಗೂ ಇದು ಸೂಟ್ ಆಗುತ್ತದೆ.

ಈ ನೆಕ್ಲೇಸ್‌ ಮಾಂಗಲ್ಯದಲ್ಲಿ ಒಂದರಿಂದ ಮೂರು ಎಳೆ ಸರದವರೆಗಿನ ವಿನ್ಯಾಸ ಲಭ್ಯ. ತಮಗೆ ಇಷ್ಟ ಬಂದ ಹಾಗೆ ಇದರ ಡಿಸೈನ್ ಮಾಡಿಸಿಕೊಳ್ಳಬಹುದು. ಇದರ ಹೈಲೈಟ್ ಅಂದರೆ ಪೆಂಡೆಂಟ್‌. ವಿವಿಧ ವಿನ್ಯಾಸದ ಬಿಳಿ, ಕೆಂಪು, ಹಸಿರು ಬಣ್ಣದ ಹರಳು ಅಥವಾ ಹವಳ, ಜೇಡ, ಮುತ್ತುಗಳನ್ನು ಬಳಸಿ ಮಾಡಿರುವ ಪೆಂಡೆಂಟ್‌ ಇದರ ಅಂದವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಇದರ ನಿರ್ವಹಣೆ ಹೇಗೆ

* ನೆಕ್ಲೇಸ್‌ ಮಾಂಗಲ್ಯ ಸರವನ್ನು ದಿನನಿತ್ಯ ಬಳಸುವುದಾದಲ್ಲಿ ಸೋಪಿನ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ನಾನವಾದ ನಂತರ ಕಾಟನ್‌ ಬಟ್ಟೆಯಿಂದ ಒರೆಸಬೇಕು.

* ಸರವನ್ನು ತೆಗೆದಿಡುವಾಗ ಹತ್ತಿಯಿಂದ ಸುತ್ತಿಡಬೇಕು. ಇದರಿಂದ ಸ್ಕ್ರಾಚ್‌ ಆಗುವುದಿಲ್ಲ.

* ಪೆಂಡೆಂಡ್‌ ಇರುವ ಸರಗಳನ್ನು ಆದಷ್ಟು ಅಗಲವಾದ ಬಾಕ್ಸ್‌ಗಳಲ್ಲಿ ಎತ್ತಿಡಬೇಕು.

* ಕರಿಮಣಿ ಜೊತೆ ಚಿನ್ನದ ಗುಂಡು ಇದ್ದರೆ ಅವು ಹೊಳಪು ಕಳೆದುಕೊಳ್ಳದಂತೆ ಆಗಾಗ ಶುಚಿಗೊಳಿಸಬೇಕು.

* ಸರದ ಅಳತೆ, ತೂಕಕ್ಕೆ ತಕ್ಕಂತೆ ಪೆಂಡೆಂಟ್‌ ಆಯ್ಕೆ ಮಾಡಿಕೊಳ್ಳಬೇಕು. ಇಲ್ಲವಾದರೆ ಸರ ಪೆಂಡೆಂಟಿನ ಭಾರಕ್ಕೆ ತುಂಡಾಗಬಹುದು.

* ಮಾಂಗಲ್ಯ ಸರ ತುಂಬಾ ಡೆಲಿಕೇಟ್ ಎನಿಸಿದರೆ ರಾತ್ರಿ ಮಲಗುವ ಮುನ್ನ ತೆಗೆದಿಟ್ಟರೆ ಒಳ್ಳೆಯದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...