ಬೆಂಗಳೂರು : ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಮಾಜಿ ಸಿಎಂ ಕುಮಾರಸ್ವಾಮಿಗೆ 68,526 ರೂ. ದಂಡ ವಿಧಿಸಲಾಗಿದೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ನನಗೆ ಬೆಸ್ಕಾಂ 68,526 ರೂ. ದಂಡ ವಿಧಿಸಿದೆ. ದಂಡ ಕಟ್ಟಬೇಕು ಎಂದು ನನಗೆ ನೋಟಿಸ್ ನೀಡಿದ್ದಾರೆ ಎಂದರು. ಅಲ್ಲದೇ ವಿದ್ಯುತ್ ಕಳ್ಳ ಎಂದು ನನ್ನ ವಿರುದ್ಧ ಲೇಬಲ್ ಕೂಡ ಅಂಟಿಸಲಾಗಿದೆ ಎಂದರು.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಜೆ.ಪಿ.ನಗರದ ವಾಸದ ಮನೆಗೆ ದೀಪಾವಳಿ ಹಬ್ಬದ ವೇಳೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪ್ರಕರಣದಲ್ಲಿ ಬೆಸ್ಕಾಂ ದಂಡ ವಿಧಿಸಿದೆ.
ದೀಪಾವಳಿಯಂದು ಬೆಂಗಳೂರಿನ ಜೆಪಿ ನಗರದಲ್ಲಿನ ತಮ್ಮ ನಿವಾಸಕ್ಕೆ ದೀಪಾಲಂಕಾರ ಮಾಡಲು ವಿದ್ಯುತ್ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ವಿರುದ್ಧ ವಿದ್ಯುತ್ ವಿತರಣಾ ಕಂಪನಿ ಬೆಸ್ಕಾಂ ದೂರು ದಾಖಲಿಸಿತ್ತು.ಬೆಸ್ಕಾಂ ಅಧಿಕಾರಿಗಳ ಬುಧವಾರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನೆಗೆ ಪರಿಶೀಲನೆಗೆ ವಿಡಿಯೋ ಆಧರಿಸಿ ಬೆಸ್ಕಾಂನ ಜಾಗೃತ ಸಮಿತಿ ಭಾರತೀಯ ವಿದ್ಯುತ್ ಕಾಯ್ದೆಯಡಿ ದೂರು ದಾಖಲಿಸಿತ್ತು.