ಕೆಲವು ವರ್ಷಗಳ ಹಿಂದೆ ಯಾರೋ ನೋಟಿನ ಮೇಲೆ ‘ಸೋನಮ್ ಗುಪ್ತಾ ಬೇವಫಾ ಹೈ’ ಎಂದು ಬರೆದಿದ್ದು, ಅದು ಇಂಟರ್ನೆಟ್ ನಲ್ಲಿ ಪೋಸ್ಟ್ ಆದ ಬಳಿಕ ರಾಷ್ಟ್ರವ್ಯಾಪಿ ಟ್ರೆಂಡ್ ಮಾಡಿದ್ದು ನಿಮಗೆ ನೆನಪಿರಬಹುದು. ಆ ವೇಳೆ ಈ ಸೋನಮ್ ಗುಪ್ತಾ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಹುಟ್ಟಿಕೊಂಡಿತ್ತು. ಈಗ ಇಂತಹದ್ದೇ ಮತ್ತೊಂದು ಟ್ರೆಂಡ್ ಶುರುವಾಗಿದೆ.
ಹೌದು, ಇಂಟರ್ನೆಟ್ ನಲ್ಲಿ ಇಲ್ಲಸಲ್ಲದ ವಿಚಾರಗಳ ಹೆಚ್ಚು ಗಮನ ಸೆಳೆಯುತ್ತವೆ ಅನ್ನೋದಕ್ಕೆ ಉದಾಹರಣೆಯಾಗಿ, ಮತ್ತೊಂದು ಟ್ರೆಂಡ್ ಸೃಷ್ಟಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಪ್ಪತ್ತು ರೂಪಾಯಿ ನೋಟಿನ ಮೇಲೆ ‘ರಾಶಿ ಬೇವಫಾ ಹೈ’ ಎಂದು ಬರೆದಿರುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಟ್ರೆಂಡ್ ಕೂಡ ಆಗ್ತಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು, ಈ ಸಂಬಂಧ ಪೋಸ್ಟ್ ಮಾಡುತ್ತಿದ್ದು ಮೀಮ್ಸ್ ಗಳು ಹೆಚ್ಚಾಗಿವೆ.
ವಿದೇಶದಲ್ಲೂ ಅಭಿಮಾನಿ ಬಳಗ ಹೊಂದಿದ್ದ ಬಪ್ಪಿ ಲಹರಿ….! ರಷ್ಯಾದಲ್ಲಿ ಫೇಮಸ್ ಆಗಿದ್ದ ʼಜಿಮ್ಮಿ ಜಿಮ್ಮಿʼ ಹಾಡು
ರಾಶಿ ಬೇವಫಾ ಹೈ ವೈರಲ್ ಆಗುತ್ತಿದ್ದಂತೆ, ‘ರಾಶಿ ಕೌನ್ ಹೈ’ ಎಂಬುದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದೆ. ಸೋನಂ ಗುಪ್ತಾ ಬೇವಫಾ ಹೈ ಟ್ರೆಂಡ್ ಶುರು ಮಾಡಿದವನೇ ಈ ಟ್ರೆಂಡ್ ಶುರು ಮಾಡಿರಬಹುದು. ಆತನಿಗೆ ಮೊದಲು ಸೋನಮ್ ಕೈ ಕೊಟ್ಟಳು ಈಗ, ರಾಶಿ ಕೂಡ ಕೈ ಕೊಟ್ಟಿದ್ದಾಳೆ ಎಂದು ಇಂಟರ್ನೆಟ್ ನಲ್ಲಿ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲಾ ಹಲವು ಬಳಕೆದಾದರು ಈ ರಾಶಿ ಯಾರು ಸೋನಮ್ ಸಹೋದರಿಯೆ ಎಂದು ಪ್ರಶ್ನೆ ಕೇಳುತ್ತಾ ಹಲವು ಮೀಮ್ಸ್ ಪೋಸ್ಟ್ ಮಾಡುತ್ತಿದ್ದಾರೆ.
https://twitter.com/DivineAish/status/1493158936329203715?ref_src=twsrc%5Etfw%7Ctwcamp%5Etweetembed%7Ctwterm%5E1493158936329203715%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fcurrency-note-with-rashi-bewafa-hai-written-on-it-goes-viral-memes-7775228%2F