ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ತಡೆಗೆ ನೈಟ್ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಮತ್ತು ನಿಷೇಧಾಜ್ಞೆಯಂತಹ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಆದರೆ, ವಾರ ಪೂರ್ತಿ ಕರ್ಫ್ಯೂ ಮಾಡುವ ಚಿಂತನೆ ಸರ್ಕಾರಕ್ಕೆ ಇದೆ ಎನ್ನಲಾಗಿದೆ.
ಏನೆಲ್ಲಾ ನಿರ್ಬಂಧವಿದ್ದರೂ ಅನೇಕರು ಅನಗತ್ಯವಾಗಿ ತಿರುಗಾಡುತ್ತಿದ್ದು, ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕ್ರಮಕೈಗೊಂಡು ವಾರ ಪೂರ್ತಿ ಕರ್ಫ್ಯೂ ಜಾರಿಗೊಳಿಸಬಹುದು ಎನ್ನಲಾಗಿದೆ.
ಅಂದಹಾಗೇ ವಾರ ಪೂರ್ತಿ ಕರ್ಫ್ಯೂ ಜಾರಿ ಮಾಡಬೇಕೆಂಬ ಚಿಂತನೆ ಸರ್ಕಾರಕ್ಕೆ ಇದೆ. ಬೆಂಗಳೂರಿನಲ್ಲಿ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು, ವೀಕೆಂಡ್ ಮಾತ್ರವಲ್ಲ ವಾರಪೂರ್ತಿ ಕರ್ಫ್ಯೂ ಹೇರಿದರೆ ಒಳ್ಳೆಯದು ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಜನ ಕೇಳಬೇಕಲ್ಲ. ವಾರವಿಡೀ ಕರ್ಫ್ಯೂ ಜಾರಿ ಮಾಡುವುದು ಬೇಡವೆಂದು ಹೇಳಲಾಗ್ತಿದೆ. ಕೆಲವರು ಆರಾಮಾಗಿ ಓಡಾಡಿಕೊಂಡಿದ್ದಾರೆ. ಜನ ಸಾಯುತ್ತಿದ್ದರೂ ಕೆಲವರಿಗೆ ಚಿಂತೆ ಇಲ್ಲ ಎಂದು ಹೇಳಿದ್ದಾರೆ.
ಸರ್ಕಾರ ವಾರದ ಎಲ್ಲಾ ದಿನವೂ ಲಾಕ್ ಡೌನ್ ಮಾಡುವ ಚಿಂತನೆ ಹೊಂದಿತ್ತು. ಪರಿಸ್ಥಿತಿ ರಾಜ್ಯದಲ್ಲಿ ಮತ್ತಷ್ಟು ಕೈಮೀರಿ ಹೋದರೆ ವಾರಪೂರ್ತಿ ಲಾಕ್ಡೌನ್ ಮಾಡುವ ಸಾಧ್ಯತೆ ಇದೆ. ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋದರೆ ಆಗ ವಾರಪೂರ್ತಿ ಲಾಕ್ಡೌನ್ ಜಾರಿಯಾದರೆ ಅಚ್ಚರಿಪಡಬೇಕಿಲ್ಲ. ಸೋಮವಾರದಿಂದ ನೈಟ್ ಕರ್ಫ್ಯೂ ಮಾತ್ರ ಇರುತ್ತದೆ. ಸೋಮವಾರ ಸಂಪುಟ ಸಭೆ ನಡೆಯಲಿದ್ದು, ವಾರ ಪೂರ್ತಿ ಕರ್ಫ್ಯೂ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬಹುದು ಎನ್ನಲಾಗಿದೆ.