
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಇಂದು ರಾತ್ರಿ 9 ಗಂಟೆಯಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಆರಂಭವಾಗಲಿದೆ. ಶನಿವಾರ ಮತ್ತು ಭಾನುವಾರ ಫುಲ್ ಕರ್ಫ್ಯೂ ಇರಲಿದೆ. ಮೇ 4 ರವರೆಗೆ ಕಠಿಣ ನಿಯಮ ಜಾರಿಯಲ್ಲಿರುತ್ತದೆ.
ಥಿಯೇಟರ್, ಶಾಲೆ-ಕಾಲೇಜು, ಧಾರ್ಮಿಕ ಕೇಂದ್ರಗಳನ್ನು ಬಂದ್ ಮಾಡಲಿದ್ದು, ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ಮತ್ತು ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಏನಿರಲ್ಲ…?
ಶಾಲೆ-ಕಾಲೇಜು, ಕೋಚಿಂಗ್ ಸೆಂಟರ್, ಸಿನಿಮಾ ಥಿಯೇಟರ್, ಯೋಗ ಕೇಂದ್ರ, ಕ್ರೀಡಾ ಸಂಕೀರ್ಣ, ಮನರಂಜನಾ ಪಾರ್ಕ್, ಈಜುಕೊಳ, ಸಭಾಂಗಣ, ರಂಗಮಂದಿರ, ಎಲ್ಲಾ ರಾಜಕೀಯ, ಧಾರ್ಮಿಕ, ಕ್ರೀಡೆ-ಮನೋರಂಜನೆ ಸಭೆ-ಸಮಾರಂಭಗಳನ್ನು ನಿಷೇಧಿಸಲಾಗಿದೆ.
ಏನಿರುತ್ತೆ…?
ವಾರದಲ್ಲಿ 5 ದಿನ ಬಸ್, ರೈಲು, ವಿಮಾನ, ಟ್ಯಾಕ್ಸಿ, ಕ್ಯಾಬ್ ಸೇವೆ, ಪೆಟ್ರೋಲ್ ಬಂಕ್, ಸರಕುಸಾಗಣೆ, ವೈದ್ಯಕೀಯ ಸೇವೆ, ಆನ್ಲೈನ್ ಕ್ಲಾಸ್, ಕ್ರೀಡಾಪಟುಗಳಿಗೆ ಈಜುಕೊಳ, ಬಾರ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶ, ನಿರ್ಮಾಣ ಚಟುವಟಿಕೆ, ದುರಸ್ತಿ ಕಾರ್ಯ, ಮುಂಗಾರು ಪೂರ್ವ ಸಿದ್ಧತೆ, ಕೈಗಾರಿಕೆಗಳು, ನ್ಯಾಯಬೆಲೆ ಅಂಗಡಿ, ಆಹಾರಧಾನ್ಯ, ಹಣ್ಣು-ತರಕಾರಿ, ಹಾಲು, ಮೀನು, ಮಾಂಸ, ಪಶು ಆಹಾರ ಮಳಿಗೆ, ತೆರೆದ ಪ್ರದೇಶದಲ್ಲಿ ತರಕಾರಿ ಹಣ್ಣು, ಹೂ ಮಾರುಕಟ್ಟೆ, ಬ್ಯಾಂಕ್, ವಿಮೆ, ಎಟಿಎಂ, ಕಚೇರಿ, ಇ – ಕಾಮರ್ಸ್, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು, ಮದುವೆಗೆ 50 ಜನ, ಅಂತ್ಯಸಂಸ್ಕಾರದಲ್ಲಿ 20 ಜನ ಸೇರಲು ಅವಕಾಶ ಇರುತ್ತದೆ.