ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಆಹಾರ ವಸ್ತು, ಹಣ್ಣು, ತರಕಾರಿ, ಹಾಲು ಮತ್ತಿತರ ಅಂಗಡಿಗಳನ್ನು ತೆರೆಯಲಾಗುವುದು. ಬೆಳಗ್ಗೆ 6 ಗಂಟೆಯಿಂದ 10 ಗಂಟೆ ಅವಧಿಯಲ್ಲಿ ಆಹಾರ ವಸ್ತುಗಳನ್ನು ಖರೀದಿಸಬಹುದಾಗಿದೆ. ಹೋಟೆಲ್ ಗಳಿಂದ ಪಾರ್ಸೆಲ್ ಪಡೆಯಬಹುದು, ಪ್ರತಿದಿನ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ಇರಲಿದ್ದು ತುರ್ತುಸೇವೆ ಹೊರತಾಗಿ ಜನ ಸಂಚಾರ ನಿರ್ಬಂಧ ಇರುತ್ತದೆ.
ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಕರ್ಫ್ಯೂ ಅವಧಿಯಲ್ಲಿ ಅನಗತ್ಯವಾಗಿ ತಿರುಗಾಡುವಂತಿಲ್ಲ. ದೂರದ ಊರುಗಳಿಗೆ ಮಾತ್ರ ಹೋಗಲು ಸಾರಿಗೆ ಸೌಲಭ್ಯ ಇರುತ್ತದೆ. ಟಿಕೆಟ್ ಇದ್ದರೆ ಮಾತ್ರ ಬಸ್, ರೈಲು, ವಿಮಾನ ನಿಲ್ದಾಣಗಳಿಗೆ ಪ್ರಯಾಣಕ್ಕೆ ಅವಕಾಶ ಇರುತ್ತದೆ. ರೋಗಿಗಳು, ಆರೈಕೆದಾರರು, ಲಸಿಕೆ ಹಾಕಿಸಿಕೊಳ್ಳುವವರು ಸಂಚರಿಸಬಹುದು. ಉಳಿದಂತೆ ಎಲ್ಲಾ ನಿರ್ಬಂಧಗಳು ವೀಕೆಂಡ್ ಕರ್ಫ್ಯೂ ಗೂ ಅನ್ವಯವಾಗುತ್ತದೆ.